ನವದೆಹಲಿ: ಜನಗಣತಿ ಮತ್ತು ಜಾತಿಗಣತಿಯನ್ನು 2027ರ ಮಾರ್ಚ್ 1ರಿಂದ ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಎರಡು ಹಂತದಲ್ಲಿ ಗಣತಿ ನಡೆಯಲಿವೆ. ಹಿಮಪಾತ ಆರಂಭವಾಗುವ ಮೊದಲೇ ಅಂದರೆ, 2026ರ ಅ.1ರಿಂದ ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿ ಗಣತಿಗಳು ಆರಂಭವಾಗಲಿವೆ.

ಈ ಕುರಿತು ಗೃಹ ಸಚಿವಾಲಯವು ಬುಧವಾರ ಹೇಳಿಕೆ ಬಿಡುಗಡೆ ಮಾಡಿದ್ದು, ‘ಜೂನ್ 16ರಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದು. ಆ ಬಳಿಕ ಗಣತಿ ನಡೆಸುವ ಪ್ರಕ್ರಿಯೆಯನ್ನು ಆರಂಭಿಸಲಾಗುವುದು’ ಎಂದು ಹೇಳಿದೆ. 2011ರಲ್ಲಿ ಕೊನೇ ಬಾರಿಗೆ ಗಣತಿಯನ್ನು ನಡೆಸಲಾಗಿತ್ತು. ಕೋವಿಡ್ ಕಾರಣ ನೀಡಿ 2021ರಲ್ಲಿ ನಡೆಯಬೇಕಿದ್ದ ಗಣತಿಯನ್ನು ಕೇಂದ್ರ ಸರ್ಕಾರ ಮುಂದೂಡಿತ್ತು.

ಈ ಗಣತಿಗಳ ಜೊತೆಯಲ್ಲಿಯೇ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಪ್ರಕ್ರಿಯೆಯನ್ನು ನಡೆಸಲಾಗುವುದೇ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. 1931ರ ಬಳಿಕ ಇದೇ ಮೊದಲ ಬಾರಿಗೆ ದೇಶದಲ್ಲಿ ಜಾತಿಗಣತಿ ನಡೆಸಲಾಗುತ್ತಿದೆ.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ಹಲವು ನಾಯಕರು ಜಾತಿ ಗಣತಿ ನಡೆಸುವಂತೆ ಕೇಂದ್ರ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದರು. ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿದ ಕೆಲವೇ ದಿನಗಳ ಬಳಿಕ ಜಾತಿ ಗಣತಿ ನಡೆಸುವುದಾಗಿ ಕೇಂದ್ರ ಸರ್ಕಾರವು ಘೋಷಿಸಿತ್ತು.

ಡಿಜಿಟಲ್ ಗಣತಿ: ದೇಶದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಗಣತಿಯ ಅವಕಾಶವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ನಾಗರಿಕರು ತಮ್ಮ ಸ್ವ ವಿವರಗಳನ್ನು ತಾವಾಗಿಯೇ ಡಿಜಿಟಲ್ ಗಣತಿ ಬಳಸಿಕೊಂಡು ನಮೂದಿಸಬಹುದಾಗಿದೆ.

ಮಹಿಳಾ ಮೀಸಲು ಯಾವಾಗ?

ಜನಗಣತಿ ಪ್ರಕ್ರಿಯೆ ಮುಗಿದ ತಿಂಗಳೊಳಗೆ ದೇಶದಲ್ಲಿನ ಜನಸಂಖ್ಯೆಯ ಅಂದಾಜು ಪ್ರಮಾಣ ತಿಳಿಯುತ್ತದೆ. ಅಂತಿಮ ವರದಿಯು 2029–2030ರ ಹೊತ್ತಿಗೆ ಅಂತಿಮ ವರದಿ ಬರಬಹುದು. ಆ ಬಳಿಕವೇ ಲೋಕಸಭೆ ಮತ್ತು ವಿಧಾನಸಭೆಗಳ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಆರಂಭಗೊಳ್ಳಬಹುದು. ಕ್ಷೇತ್ರ ಮರುವಿಂಗಡಣೆ ಆಯೋಗವನ್ನು ರಚಿಸಬೇಕಾಗುತ್ತದೆ. ತನ್ನ ಅಂತಿಮ ವರದಿ ಸಲ್ಲಿಸಲು ಈ ಆಯೋಗಕ್ಕೆ ಹಲವು ವರ್ಷಗಳೇ ಬೇಕಾಗಬಹುದು.

ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವುದು ಕೂಡ ಬಹಳ ದೂರದ ಮಾತಾಗುತ್ತದೆ. ಕ್ಷೇತ್ರ ಮರುವಿಂಗಡಣೆ ಆದ ಬಳಿಕವಷ್ಟೇ ಮಹಿಳಾ ಮೀಸಲಾತಿ ಜಾರಿ ಮಾಡಬಹುದಾಗಿದೆ.

2021ರಲ್ಲಿಯೇ ನಡೆಯಬೇಕಿದ್ದ ಗಣತಿಯನ್ನು ಇನ್ನೂ 23 ತಿಂಗಳು ಮುಂದೂಡುವುದಕ್ಕೆ ಕಾರಣವಿಲ್ಲ. ಮೋದಿ ಸರ್ಕಾರಕ್ಕೆ ಪತ್ರಿಕೆಗಳಲ್ಲಿ ತಲೆಬರಹ (ಹೆಡ್ಲೈನ್) ಬರುವಂತೆ ಮಾಡಿಕೊಳ್ಳಲು ಗೊತ್ತಿದೆಯಷ್ಟೆ, ಗಡುವಿನೊಳಗೆ (ಡೆಡ್ಲೈನ್) ಕೆಲಸ ಮಾಡುವುದು ಗೊತ್ತಿಲ್ಲ.
–ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.