22 ವರ್ಷದ ಕ್ಷೀರಸಾಗರ ಎಂಬುವರೇ ಮೃತರು. ಮುಂಬೈನಿಂದ 70 ಕಿ.ಮೀ ದೂರದ ಖೊಪೋಲಿ ಪ್ರದೇಶದಲ್ಲಿರುವ ಝೆನಿತ್ ಜಲಪಾತದಲ್ಲಿ ಈ ಅವಘಢ ಸಂಭವಿಸಿದೆ.
ಖೊಪೋಲಿಯ ನಿವಾಸಿಗಳಾದ ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರು ಜಲಪಾತದ ಬುಡದಲ್ಲಿರುವ ನೀರಿನ ಕೊಳದಲ್ಲಿ ಇರುವಾಗ, ಭಾರಿ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿದೆ. ಈ ವೇಳೆ ಆಯತಪ್ಪಿ ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅವರ ಕುಟುಂಬದ ನಾಲ್ವರು ಕೈಕೈ ಹಿಡಿದುಕೊಂಡು ದಡ ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.