ನವದೆಹಲಿ (ಪಿಟಿಐ): ಜಂಟಿ ಸಂಸದೀಯ ಸಮಿತಿ (ಜೆಪಿಸಿ) ನಡೆಸುತ್ತಿರುವ 2ಜಿ ತರಂಗಾಂತರ ಹಂಚಿಕೆ ಹಗರಣದ ತನಿಖೆ ನಿಗದಿತ ಕಾಲಮಿತಿಯಲ್ಲಿ ಮುಗಿಯದ ಕಾರಣ ಸಮಿತಿ ಅವಧಿ ಮುಂದಿನ ಬಜೆಟ್ ಅಧಿವೇಶನದ ವರೆಗೂ ವಿಸ್ತರಿಸಲಾಗಿದೆ.

ಇದೇ ಗುರುವಾರಕ್ಕೆ ಮುಕ್ತಾಯವಾಗುವ ಮುಂಗಾರು ಅಧಿವೇಶನದೊಳಗೆ ತನಿಖೆ ಮುಗಿಸುವಂತೆ ಜೆಪಿಸಿಗೆ ಕಾಲಮಿತಿ ನೀಡಲಾಗಿತ್ತು. ಆದರೆ ತನಿಖೆ ಪೂರ್ಣವಾಗದ ಕಾರಣ ಅವಧಿ ವಿಸ್ತರಿಸಲು ಕೋರಿ ಜೆಪಿಸಿ ಅಧ್ಯಕ್ಷ ಪಿ.ಸಿ. ಚಾಕೊ ಲೋಕಸಭೆಯಲ್ಲಿ ಮಂಗಳವಾರ ಗೊತ್ತುವಳಿ ಮಂಡಿಸಿದರು. ಮುಂದಿನ ಬಜೆಟ್ ಅಧಿವೇಶನದ ಅಂತ್ಯದೊಳಗೆ ತನಿಖಾ ವರದಿ ಸಲ್ಲಿಸುವ ಗೊತ್ತುವಳಿ ಧ್ವನಿ ಮತದಿಂದ ಅಂಗೀಕರಿಸಲಾಯಿತು.

30 ಮಂದಿ ಸದಸ್ಯರನ್ನು ಒಳಗೊಂಡಿರುವ ಜೆಪಿಸಿ ಇದುವರೆಗೆ ಜಾರಿ ನಿರ್ದೇಶನಾಲಯ (ಇ.ಡಿ), ಸಿಬಿಐ ಅಧಿಕಾರಿಗಳ ಹಾಗೂ ದೂರಸಂಪರ್ಕ ಇಲಾಖೆ ಮಾಜಿ ಕಾರ್ಯದರ್ಶಿಯ ವಿಚಾರಣೆಯನ್ನಷ್ಟೇ ನಡೆಸಿದೆ. ದೂರ ಸಂಪರ್ಕ ಇಲಾಖೆ ಮತ್ತೊಬ್ಬ ಮಾಜಿ ಕಾರ್ಯದರ್ಶಿ, ಟ್ರಾಯ್ ಮಾಜಿ ಅಧ್ಯಕ್ಷ, ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಮತ್ತು ದೂರ ಸಂಪರ್ಕ ಖಾತೆ ಮಾಜಿ ಸಚಿವರ ವಿಚಾರಣೆ ಇನ್ನು ಬಾಕಿ ಇದೆ.

ಮಾರ್ಚ್ 4ರಂದು ರಚಿತವಾದ ಜೆಪಿಸಿಯಲ್ಲಿ ಲೋಕಸಭೆಯ 20 ಮತ್ತು ರಾಜ್ಯಸಭೆಯ 10 ಮಂದಿ ಸದಸ್ಯರು ಇದ್ದಾರೆ. ಈ ಸಮಿತಿ 1998ರಿಂದ 2009ರವರೆಗೆ ಹಂಚಿಕೆಯಾದ 2ಜಿ ತರಂಗಾಂತರ, ಪರವಾನಗಿ ನೀಡಿಕೆ, ದರ ನಿಗದಿ ಕುರಿತಂತೆ ತನಿಖೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.