ಕಚ್: ಗುಜರಾತ್ನ ಕಚ್ ಜಿಲ್ಲೆಯಲ್ಲಿ ಇಂದು (ಭಾನುವಾರ) ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ ಎಂದು ಭೂಕಂಪನ ಸಂಶೋಧನಾ ಸಂಸ್ಥೆ (ಐಎಸ್ಆರ್) ತಿಳಿಸಿದೆ.

ಘಟನೆಯಲ್ಲಿ ಯಾವುದೇ ಸಾವು-ನೋವು ಬಗ್ಗೆ ವರದಿಯಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಭಚಾವೂನಿಂದ ಈಶಾನ್ಯಕ್ಕೆ 18 ಕಿ.ಮೀ. ದೂರದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಗಾಂಧಿನಗರ ಮೂಲದ ಐಎಸ್ಆರ್ ತಿಳಿಸಿದೆ.

ಇದು ಕಳೆದೊಂದು ತಿಂಗಳಲ್ಲಿ ಈ ಪ್ರದೇಶದಲ್ಲಿ ನಡೆದ ಮೂರನೇ ಕಂಪನದ ಅನುಭವವಾಗಿದೆ. ಡಿಸೆಂಬರ್ 23ರಂದು 3.7 ಮತ್ತು ಡಿ. 7ರಂದು 3.2 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಇನ್ನು ಕಚ್ನಲ್ಲಿ ನವೆಂಬರ್ 18ರಂದು 4 ತೀವ್ರತೆಯ ಮತ್ತು ನ.15ರಂದು ಪಠಾಣ್ನಲ್ಲಿ 4.2 ತೀವ್ರತೆಯ ಕಂಪನದ ಅನುಭವವಾಗಿತ್ತು.

ಪದೇ ಪದೇ ಭೂಕಂಪ ಸಂಭವಿಸುವ ಅಪಾಯದ ವಲಯದಲ್ಲಿ ಕಚ್ ಪ್ರದೇಶವಿದೆ. ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಜಿಎಸ್ಡಿಎಂ) ಅಂಕಿಅಂಶಗಳ ಪ್ರಕಾರ ಕಳೆದ 200 ವರ್ಷಗಳಲ್ಲಿ ಈ ಪ್ರದೇಶದಲ್ಲಿ ಒಂಬತ್ತು ಪ್ರಮುಖ ಭೂಕಂಪಗಳು ಸಂಭವಿಸಿವೆ.

2001ರ ಜನವರಿ 26ರಂದು ಅತಿ ಭೀಕರ ಭೂಕಂಪ ಸಂಭವಿಸಿತ್ತು. ಇದು ಕಳೆದೆರಡು ಶತಮಾನಗಳಲ್ಲಿ ಭಾರತದಲ್ಲಿ ಸಂಭವಿಸಿದ ಎರಡನೇ ಅತಿ ಭೀಕರ ಭೂಕಂಪವಾಗಿತ್ತು. ಈ ಭೂಕಂಪದಲ್ಲಿ ಅಪಾರ ನಾಶ-ನಷ್ಟ ಸಂಭವಿಸಿತ್ತು. 13,800 ಮಂದಿ ಮೃತಪಟ್ಟಿದ್ದರಲ್ಲದೆ 1.67 ಲಕ್ಷ ಮಂದಿ ಗಾಯಗೊಂಡಿದ್ದರು.
.ವ್ಯಾನುವಾಟು ಸಮುದ್ರ ತೀರದಲ್ಲಿ 7.3 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ.Earthquake | ತೆಲಂಗಾಣದ ಮುಲುಗುವಿನಲ್ಲಿ 5.3 ತೀವ್ರತೆಯ ಭೂಕಂಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.