ಜೈಪುರ: ರಾಜಸ್ಥಾನ ಉಪಮುಖ್ಯಮಂತ್ರಿ ಪ್ರೇಮ್ ಚಂದ್ ಬೈರ್ವಾ ಅವರಿಗೆ ಜೀವ ಬೆದರಿಕೆಯೊಡ್ಡಿದ್ದ ಆರೋಪದಡಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಇಲ್ಲಿನ ಕೇಂದ್ರ ಕಾರಾಗೃಹದಿಂದ ಕರೆ ಮಾಡಿ, ಬೈರ್ವಾ ಅವರಿಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
.ವೃತ್ತಿ ಬದುಕಿನ ಈ ಹಂತದಲ್ಲೂ ಸುಧಾರಣೆಗೆ ಒತ್ತು ನೀಡುವ ಕೊಹ್ಲಿ: ಡಿಕೆ ಶ್ಲಾಘನೆ.ರಾಜ್ಯದಲ್ಲಿ ಕ್ಯಾಂಪಸ್ ಆರಂಭಿಸಲು ಪೋರ್ಟ್ಸ್ ಮೌತ್ ವಿಶ್ವವಿದ್ಯಾಲಯ ಒಲವು.
ಪೊಲೀಸ್ ಕಂಟ್ರೋಲ್ ರೂಮ್ಗೆ ಬೆದರಿಕೆ ಕರೆ ಬಂದಿತ್ತು. ಈ ಸಂಬಂಧ ತನಿಖೆ ನಡೆಸಿದಾಗ ಕರೆ ಬಂದ ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಲಾಯಿತು. ಆ ಕರೆ ಬಂದಿದ್ದು ಕಾರಾಗೃಹದಿಂದಲೇ ಎಂದು ಖಚಿತಪಡಿಸಿಕೊಳ್ಳಲಾಯಿತು. ಕಾರಾಗೃಹದಲ್ಲಿ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಬಳಿಕ ಆರೋಪಿಗಳಿಂದ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಯಿತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೆಳಹಂತದ ವ್ಯವಸ್ಥೆಯಲ್ಲಿ ಲೋಪಗಳಿದ್ದು, ಮೊಬೈಲ್ ಫೋನ್ಗಳು ಮತ್ತು ಸಿಮ್ ಕಾರ್ಡ್ಗಳು ಜೈಲಿಗೆ ತಲುಪುತ್ತವೆ ಎಂದು ಡಿಜಿಪಿ ಉತ್ಕಲ್ ರಂಜನ್ ಸಾಹೂ ಹೇಳಿದ್ದಾರೆ.

ಜೈಲುಗಳಲ್ಲಿ ಹೈಟೆಕ್ ಜಾಮರ್ ವ್ಯವಸ್ಥೆಯನ್ನು ಅಳವಡಿಸಲಾಗುವುದು, ಇದರಿಂದಾಗಿ ಯಾರಾದರೂ ಜೈಲಿಗೆ ಮೊಬೈಲ್ ಫೋನ್ಗಳು ಮತ್ತು ಸಿಮ್ ಕಾರ್ಡ್ಗಳನ್ನು ಕಳುಹಿಸಿದರೂ ಕರೆಗಳನ್ನು ನಿರ್ಬಂಧಿಸಲಾಗುತ್ತದೆ ಎಂದು ಸಾಹೂ ತಿಳಿಸಿದ್ದಾರೆ.
.ಬಿಜೆಪಿ ಅವಧಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ: ಪೊಲೀಸರೊಂದಿಗೆ ಕಾಂಗ್ರೆಸ್ ಘರ್ಷಣೆ.ಡಿಕೆಶಿಯನ್ನು ಹಿಂಬಾಗಿಲ ಮೂಲಕ ಹಣಿಯಲು ಯತ್ನಿಸುತ್ತಿರುವ ಬಿಜೆಪಿ: ರಮೇಶ್ ಬಾಬು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.