ಬೆಂಗಳೂರು: ರಾಜ್ಯದಲ್ಲಿ ತನ್ನ ಕ್ಯಾಂಪಸ್ ಆರಂಭಿಸಲು ಆಸಕ್ತಿ ಹೊಂದಿರುವ ಬ್ರಿಟನ್ನಿನ ಪೋರ್ಟ್ಸ್ ಮೌತ್ ವಿಶ್ವವಿದ್ಯಾಲಯದ ಉನ್ನತ ಮಟ್ಟದ ನಿಯೋಗವು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರನ್ನು ಗುರುವಾರ ಭೇಟಿ ಮಾಡಿ ಚರ್ಚಿಸಿತು.

‘ವಿದೇಶಿ ವಿಶ್ವವಿದ್ಯಾಲಯಗಳು ಸಹಭಾಗಿತ್ವದ ಮೂಲಕ ಅಥವಾ ಸ್ವತಂತ್ರವಾಗಿಯೇ ರಾಜ್ಯದಲ್ಲಿ ತಮ್ಮ ಕ್ಯಾಂಪಸ್ ತೆರೆಯಲು ಮುಂದೆ ಬರುತ್ತಿರುವುದು ಸ್ವಾಗತಾರ್ಹ. ಇದಕ್ಕೆ ಅಗತ್ಯವಾದ ಜಮೀನು ಮತ್ತಿತರ ಸೌಲಭ್ಯಗಳನ್ನು ಸರ್ಕಾರ ನೀಡಲಿದೆ. ಯುಜಿಸಿ ನಿಯಮಾವಳಿಗಳ ಪ್ರಕಾರ, ಜಾಗತಿಕ ಮಟ್ಟದಲ್ಲಿ ಮೊದಲ 500 ಸ್ಥಾನದಲ್ಲಿರುವ ಶಿಕ್ಷಣ ಸಂಸ್ಥೆಗಳು ಭಾರತದಲ್ಲಿ ಎಲ್ಲಿ ಬೇಕಾದರೂ ತಮ್ಮ ಕ್ಯಾಂಪಸ್ ತೆರೆಯಲು ಅವಕಾಶವಿದೆ’ ಎಂದು ಸಚಿವರು ನಿಯೋಗಕ್ಕೆ ತಿಳಿಸಿದರು.

ದಾಬಸ್ಪೇಟೆ-ದೊಡ್ಡಬಳ್ಳಾಪುರ ನಡುವೆ ಅಸ್ತಿತ್ವಕ್ಕೆ ಬರುವ ‘ಕ್ವಿನ್ ಸಿಟಿ’ಯಲ್ಲಿ ದೇಶ-ವಿದೇಶಗಳ ಅಗ್ರಮಾನ್ಯ ವಿಶ್ವವಿದ್ಯಾಲಯಗಳ ಕ್ಯಾಂಪಸ್ಗೆ ಆದ್ಯತೆ ನೀಡಲಾಗುತ್ತದೆ ಎಂದರು.

ಪೋರ್ಟ್ಸ್ ಮೌತ್ ವಿಶ್ವವಿದ್ಯಾಲಯದ ಕುಲಾಧಿಪತಿ (ಜಾಗತಿಕ ವಿಭಾಗ) ಪ್ರೊ.ಬಾಬಿ ಮೆಹತಾ, ‘ಸಹಭಾಗಿತ್ವದ ಮೂಲಕ ರಾಜ್ಯದಲ್ಲಿ ತಮ್ಮ ವಿಶ್ವವಿದ್ಯಾಲಯದ ಕ್ಯಾಂಪಸ್ ಸ್ಥಾಪಿಸಬೇಕೆಂಬುದು ತಮ್ಮ ಆಸಕ್ತಿಯಾಗಿದೆ. ಕ್ವಿನ್ ಸಿಟಿ ಪ್ರದೇಶಕ್ಕೂ ಭೇಟಿ ನೀಡಲಾಗುವುದು’ ಎಂದರು.

ಐಎಸ್ಡಿಸಿ ನಿರ್ದೇಶಕ ಸುಬಿ ಕುರಿಯನ್, ಸಹಭಾಗಿತ್ವ ಮುಖ್ಯಸ್ಥ ಶೋನ್ ಬಾಬು, ವ್ಯವಸ್ಥಾಪಕ ಗಗನ್ ಒಬೆರಾಯ್, ಯುಎಸ್ಡಿಸಿ ಹಿರಿಯ ಉಪಾಧ್ಯಕ್ಷ ವಿವೇಕ್ ಭಟ್ಟಾಚಾರ್ಯ, ಜತಿನ್ ಖಂಡೇಲ್ವಾಲ್ ನಿಯೋಗದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.