ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಠಾಣೆ: ಜಾಹೀರಾತು ಹೋರ್ಡಿಂಗ್‌ ಕುಸಿದು 3 ವಾಹನ ಜಖಂ

Published : 2 ಆಗಸ್ಟ್ 2024, 13:46 IST
Last Updated : 2 ಆಗಸ್ಟ್ 2024, 13:46 IST
ಫಾಲೋ ಮಾಡಿ
Comments

ಠಾಣೆ: ಮಹಾರಾಷ್ಟ್ರದ ಠಾಣೆಯಲ್ಲಿ ಜಾಹೀರಾತು ಹೋರ್ಡಿಂಗ್‌ವೊಂದು (ಫಲಕ) ಧರೆಗುರುಳಿದ್ದು, ಅದರಡಿಯಲ್ಲಿ ಸಿಲುಕಿದ ಮೂರು ವಾಹನಗಳು ಜಖಂಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಠಾಣೆಯ ಡೊಂಬಿವಿಲಿ ನಗರದ ಸಹಜಾನಂದ್‌ ಚೌಕ್‌ನಲ್ಲಿ ಶುಕ್ರವಾರ ಮುಂಜಾನೆ 10 ಗಂಟೆಗೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಯಾರೂ ಗಾಯಗೊಂಡ ಬಗ್ಗೆ ಹಾಗೂ ಹೋರ್ಡಿಂಗ್‌ನ ಅಳತೆ ಎಷ್ಟಿತ್ತು ಎನ್ನುವ ಕುರಿತು ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ. 

ಸ್ಥಳೀಯ ತಹಶೀಲ್ದಾರ್‌ ಸಚಿನ್‌ ಶೇಜಾಲ್‌ ಅವರು, ‘ಮೂರು ವಾಹನಗಳು ಜಖಂಗೊಂಡಿವೆ. ಸ್ಥಳಕ್ಕೆ ರಕ್ಷಣಾ ಕಾರ್ಯಾಚರಣೆ ತಂಡಗಳನ್ನು ಕಳುಹಿಸಲಾಗಿದೆ’ ಎಂದರು. 

ಈಚೆಗೆ ಭಾರಿ ಬಿರುಗಾಳಿ ಸಹಿತ ಮಳೆಗೆ ಮುಂಬೈನ ಚೆಡ್ಡಾನಗರದಲ್ಲಿ ಪೆಟ್ರೋಲ್‌ ಪಂಪ್‌ ಮೇಲೆ ಬೃಹತ್‌ ಜಾಹೀರಾತು ಫಲಕ ಉರುಳಿ ಬಿದ್ದ ಪರಿಣಾಮ 16 ಮಂದಿ ಸಾವಿಗೀಡಾಗಿದ್ದರು. ಘಟನೆಯಲ್ಲಿ 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT