ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಜರಾತ್: ಗಣಪತಿ ವಿಸರ್ಜನೆ ವೇಳೆ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಸಾವು

Published : 12 ಸೆಪ್ಟೆಂಬರ್ 2024, 8:19 IST
Last Updated : 12 ಸೆಪ್ಟೆಂಬರ್ 2024, 8:19 IST
ಫಾಲೋ ಮಾಡಿ
Comments

ಪಟಾನ್ (ಗುಜರಾತ್‌): ಗುಜರಾತ್‌ನ ಪಟಾನ್‌ ಜಿಲ್ಲೆಯಲ್ಲಿ ಗಣಪತಿ ಮೂರ್ತಿ ವಿಸರ್ಜನೆ ವೇಳೆ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆ ಮತ್ತು ಆಕೆಯ ಇಬ್ಬರು ಗಂಡು ಮಕ್ಕಳು ಹಾಗೂ ಆಕೆಯ ಸಹೋದರ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಅವರು ಹೇಳಿದ್ದಾರೆ.

‘ಬುಧವಾರ ಸಂಜೆ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಪಟಾನ್‌ ಬಳಿಯ ಸರಸ್ವತಿ ನದಿಯಲ್ಲಿ ಏಳು ಮಂದಿ ಕೊಚ್ಚಿಕೊಂಡು ಹೋಗಿದ್ದಾರೆ. ಇಬ್ಬರು ಪುರುಷರು ಮತ್ತು ಮಹಿಳೆಯನ್ನು ಸ್ಥಳೀಯರು ತಕ್ಷಣ ರಕ್ಷಿಸಿದ್ದಾರೆ. ಆದರೆ, ಒಂದೇ ಕುಟುಂಬದ ನಾಲ್ವರು ಕಾಣೆಯಾಗಿದ್ದರು’ ಎಂದು ಜಿಲ್ಲಾಧಿಕಾರಿ ಅರವಿಂದ ವಿಜಯನ್‌ ತಿಳಿಸಿದ್ದಾರೆ.

ತೀವ್ರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಬಳಿಕ, ಇಂದು (ಗುರುವಾರ) ಮುಂಜಾನೆ ನಾಲ್ವರ ಶವಗಳು ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ.

ಮೃತರನ್ನು ಶೀತಲ್‌ ಪ್ರಜಾಪತಿ (37) ಆಕೆಯ ಮಕ್ಕಳಾದ ದಕ್ಷ್‌ (17) ಮತ್ತು ಜಿಮಿತ್‌ (15) ಹಾಗೂ ಆಕೆಯ ಸಹೋದರ ನಯನ್‌ ಪ್ರಜಾಪತಿ (30) ಎಂದು ಗುರುತಿಸಲಾಗಿದೆ. ಎಲ್ಲರೂ ಪಟಾನ್‌ ನಗರದ ವೆರೈ ಚಕ್ಲಾ ಪ್ರದೇಶದ ನಿವಾಸಿಗಳು ಎಂದು ವಿಜಯನ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT