ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ ತಾಯಿ– ಮಗ

Last Updated 10 ಆಗಸ್ಟ್ 2022, 2:23 IST
ಅಕ್ಷರ ಗಾತ್ರ

ತಿರುವನಂತಪುರ: ತಾಯಿಯೊಬ್ಬರು ತಮ್ಮ ಮಗನನ್ನು 10ನೇ ತರಗತಿಯಲ್ಲಿ ಓದಲು ಪ್ರೋತ್ಸಾಹಿಸಲು ಪುಸ್ತಕಗಳನ್ನು ಓದಲು ಪ್ರಾರಂಭಿಸಿದ್ದರು. ಆದರೆ, ಅವರ ನಿರಂತರ ಕಲಿಕೆಯು ಕೇರಳ ಲೋಕಸೇವಾ ಆಯೋಗದ (ಪಿಎಸ್‌ಸಿ) ಪರೀಕ್ಷೆಯಲ್ಲಿ ತೇರ್ಗಡೆಯಾಗುವಂತೆ ಪ್ರೇರೇಪಿಸಿದೆ.

ಹೌದು, 42 ವರ್ಷದ ಬಿಂದು ಅವರು ಕೆಳದರ್ಜೆಯ ನೌಕರಿ (ಎಲ್‌ಜಿಎಸ್) ಪರೀಕ್ಷೆಯಲ್ಲಿ 92ನೇ ರ‍್ಯಾಂಕ್‌ನೊಂದಿಗೆ ತೇರ್ಗಡೆಯಾಗಿದ್ದರೆ, ಅವರ 24 ವರ್ಷದ ಮಗ ವಿವೇಕ್ ಎಲ್‌ಡಿಸಿ ಪರೀಕ್ಷೆಯಲ್ಲಿ 38ನೇ ರ‍್ಯಾಂಕ್‌ ಪಡೆದಿದ್ದಾರೆ.

ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂಬ ಬಯಕೆಯೊಂದಿಗೆ ತಾಯಿ –ಮಗ ಇಬ್ಬರೂ ಒಟ್ಟಿಗೆ ಖಾಸಗಿ ಕೋಚಿಂಗ್ ಸೆಂಟರ್‌ನಲ್ಲಿ ನಿರಂತರ ಅಭ್ಯಾಸ ನಡೆಸಿದ್ದರು.

ಸದ್ಯ ಬಿಂದು ಅವರು ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.

‘ನಾನು ಒಬ್ಬಂಟಿಯಾಗಿ ಓದಲು ಇಷ್ಟಪಡುತ್ತೇನೆ. ನಮ್ಮ ತಾಯಿ ಯಾವಾಗಲೂ ಓದುವುದಿಲ್ಲ. ಆಕೆ ಸಮಯ ಸಿಕ್ಕಾಗ ಮಾತ್ರ ಅಭ್ಯಾಸ ನಡೆಸುತ್ತಿದ್ದರು’ ಎಂದು ವಿವೇಕ್ ಹೇಳಿದ್ದಾರೆ.

ಪಿಎಸ್‌ಸಿ ಪರೀಕ್ಷೆ ಆಕಾಂಕ್ಷಿಗಳು ಹೇಗಿರಬೇಕು ಎಂಬುದಕ್ಕೆ ನಾನೇ ಅತ್ಯುತ್ತಮ ಉದಾಹರಣೆ. ನಾನು ನಿರಂತರವಾಗಿ ಅಧ್ಯಯನ ಮಾಡುವುದಿಲ್ಲ. ನಾನು ಪರೀಕ್ಷೆಯ ದಿನಾಂಕಕ್ಕಿಂತ ಆರು ತಿಂಗಳ ಮೊದಲು ಪರೀಕ್ಷೆಗೆ ತಯಾರಿ ಪ್ರಾರಂಭಿಸುತ್ತೇನೆ ಎಂದು ವಿವೇಕ್‌ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT