ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನಲ್ಲಿ ಇದುವರೆಗೆ 53 ಶಂಕಿತ 'ಜಿಹಾದಿ'ಗಳನ್ನು ಬಂಧಿಸಲಾಗಿದೆ: ಸರ್ಕಾರ

Last Updated 24 ಡಿಸೆಂಬರ್ 2022, 10:28 IST
ಅಕ್ಷರ ಗಾತ್ರ

ಗುವಾಹಟಿ: ಬಾಂಗ್ಲಾದೇಶದ ಓರ್ವ ಸೇರಿದಂತೆ ಅಸ್ಸಾಂನಲ್ಲಿ ಇದುವರೆಗೆ ಶಂಕಿತ 53 'ಜಿಹಾದಿ'ಗಳನ್ನು ಬಂಧಿಸಲಾಗಿದೆ ಎಂದು ರಾಜ್ಯ ಸರ್ಕಾರ ಶನಿವಾರ ವಿಧಾನಸಭೆಯಲ್ಲಿ ಮಾಹಿತಿ ನೀಡಿದೆ.

'ಜಿಹಾದಿಗಳು' ಎಂದು ಆರೋಪ ಹೊತ್ತಿರುವ ಇನ್ನೂ ಐವರು ಬಾಂಗ್ಲಾದೇಶಿಯರು ತಲೆಮರೆಸಿಕೊಂಡಿದ್ದಾರೆ ಎಂದು ಗೃಹ ಖಾತೆಯನ್ನೂ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ತೆರಸ್‌ ಗೊವಲಾ ಅವರ ಪ್ರಶ್ನೆಗೆ ಉತ್ತರಿಸಿದ ಶರ್ಮಾ, ಮೂಲಭೂತವಾದಿ ಆಪಾದಿತ ಚಟುವಟಿಕೆಗಳಿಗೆ ಸಂಬಂಧಿಸಿ ಮಾರ್ಚ್‌ 2022ರಿಂದ ರಾಜ್ಯದಲ್ಲಿ 9 ಪ್ರಕರಣಗಳು ದಾಖಲಾಗಿವೆ. ಬರ್ಪೆಟಾ, ಬಂಗಾಯಿಗಾಂವ್‌, ಧುಬರಿ, ಗೋಲ್ವಾರಾ, ತಾಮುಲ್‌ಪುರ ಮತ್ತು ನಲಬಾಢಿ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇವುಗಳು ಮೂಲಭೂತವಾದಿ ಶಕ್ತಿಗಳ ಕೇಂದ್ರಗಳಾಗಿವೆ ಎಂದರು.

ಈ ಪ್ರಕರಣಗಳ ಪೈಕಿ ಒಂದನ್ನು ಎನ್‌ಐಎ ತನಿಖೆ ನಡೆಸುತ್ತಿದೆ. ಕೋರ್ಟ್‌ಗೆ ಚಾರ್ಚ್‌ಶೀಟ್‌ಅನ್ನು ಸಲ್ಲಿಸಿದೆ ಎಂದರು.

'ಇದುವರೆಗೆ ಶಂಕಿತ 53 'ಜಿಹಾದಿ'ಗಳನ್ನು ಬಂಧಿಸಲಾಗಿದೆ. ಈ ಪೈಕಿ ಬಾಂಗ್ಲಾದೇಶದ ಪ್ರಜೆ, ಬರ್ಪೆಟಾ ಜಿಲ್ಲೆಯಲ್ಲಿ ಧಾರ್ಮಿಕ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಮಾಮ್‌ ಸೇರಿದ್ದಾರೆ. ಮುಸ್ಲಿಂ ಯುವಕರನ್ನು ಪ್ರಚೋದಿಸಿ 'ಜಿಹಾದಿ' ಪಡೆಗೆ ಸೇರಿಸುವ ಉದ್ದೇಶದಿಂದ ವಿವಿಧ ಮದರಸಾಗಳಲ್ಲಿ ಭಾಷಣ ಮಾಡಿದ ಇನ್ನೂ ಐವರು ಬಾಂಗ್ಲಾದೇಶಿಯರು ತಲೆಮರೆಸಿಕೊಂಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT