ಪಟ್ನಾ: ಮೇವು ಹಗರಣದ ವಿವಿಧ ಪ್ರಕರಣಗಳಲ್ಲಿ ಅಪರಾಧಿಯಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಶಿಕ್ಷೆ ಪ್ರಮಾಣವನ್ನು ಸಿಬಿಐ ವಿಶೇಷ ನ್ಯಾಯಾಲಯ ಜನವರಿ 3ರಂದು ಪ್ರಕಟಿಸಲಿದೆ.

ಶಿಕ್ಷೆ ಪ್ರಮಾಣ ಪ್ರಕಟವಾಗುವ ಎರಡು ದಿನ ಮೊದಲು ಅಂದರೆ ಸೋಮವಾರ, ಪಕ್ಷದ ಮೂವರು ಮುಖಂಡರು ರಾಂಚಿಯ ಬಿರ್ಸಾ ಮುಂಡಾ ಜೈಲಿನಲ್ಲಿ ಲಾಲು ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಲಾಲು ಅವರನ್ನು ಭೇಟಿಯಾಗಲು ಹಲವು ಬೆಂಬಲಿಗರು ಜೈಲಿನ ಮುಂಭಾಗದಲ್ಲಿ ನೆರೆದಿದ್ದರು. ಆದರೆ ಜೈಲು ಅಧಿಕಾರಿಗಳು ಮೂವರಿಗೆ ಮಾತ್ರ ಭೇಟಿಯಾಗಲು ಅವಕಾಶ ನೀಡಿದರು. ಕಳೆದ ವಾರ ಲಾಲು ಅವರ ವಕೀಲ ಪ್ರಭಾತ್ ಕುಮಾರ್ ಅವರಿಗೂ ಭೇಟಿಗೆ ಅವಕಾಶ ನಿರಾಕರಿಸಲಾಗಿತ್ತು.

‘ಹೊಸ ವರ್ಷದ ಪ್ರಯುಕ್ತ ಲಾಲು ಅವರಿಗೆ ಕೊಡಲು ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳು ಮತ್ತು ಹಸಿರು ತರಕಾರಿಗಳನ್ನು ತಂದಿದ್ದೆವು. ಆದರೆ ಎಲ್ಲರಿಗೂ ಪ್ರವೇಶ ನಿರಾಕರಿಸಿದ್ದರಿಂದಾಗಿ ಜೈಲು ಅಧಿಕಾರಿಗಳಿಗೆ ನೀಡಿದೆವು. ಅವರು ಅದನ್ನು ಲಾಲು ಪ್ರಸಾದ್ ಅವರಿಗೆ ತಲುಪಿಸುವುದಾಗಿ ತಿಳಿಸಿದ್ದಾರೆ’ ಎಂದು ಲಾಲು ಬೆಂಬಲಿಗ, ಶಾಸಕ ಭೋಲಾ ಯಾದವ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.