ನವದೆಹಲಿ: ನೀರಿನಲ್ಲಿ ಮುಳುಗುತ್ತಿದ್ದ ಜನರನ್ನು ರಕ್ಷಿಸಿದ ಇಬ್ಬರು ಯುವಕರು, ಬೆಂಕಿ ಹೊತ್ತಿಕೊಂಡ ವಾಹನದಿಂದ ನಾಲ್ವರು ಮಕ್ಕಳನ್ನು ರಕ್ಷಿಸಿದ ಪಂಜಾಬ್ ಬಾಲಕಿಗೆ ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುವ ಸಂಸ್ಥೆಯೊಂದು ಶುಕ್ರವಾರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ಫೇರ್ (ಐಸಿಸಿಡಬ್ಲ್ಯೂ) ಮೂರು ವರ್ಷಗಳ ನಂತರ ನಡೆಸಿದ ಈ ಪ್ರಶಸ್ತಿಯನ್ನು ವಿವಿಧ ರಾಜ್ಯಗಳ 56 ಮಕ್ಕಳಿಗೆ ನೀಡಲಾಯಿತು.

2020ರ ಸಾಲಿನ 22 ಪ್ರಶಸ್ತಿ ವಿಜೇತರು, 2021ರ ಸಾಲಿನ 16 ಹಾಗೂ 2022ರ ಸಾಲಿನ 18 ಮಂದಿ ಪ್ರಶಸ್ತಿ ವಿಜೇತರನ್ನು ಶುಕ್ರವಾರ ಸನ್ಮಾನಿಸಲಾಯಿತು ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಐಸಿಸಿಡಬ್ಲ್ಯೂ ಮಾರ್ಕಂಡೇಯ ಪ್ರಶಸ್ತಿ, ಪ್ರಹ್ಲಾದ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ, ಅಭಿಮನ್ಯು ಪ್ರಶಸ್ತಿ, ಶ್ರವಣ್ ಪ್ರಶಸ್ತಿ, ಧ್ರುವ ಪ್ರಶಸ್ತಿ ಸೇರಿದಂತೆ ಐಸಿಸಿಡಬ್ಲ್ಯೂನ ಇತರ ಆರು ವಿಶೇಷ ಪ್ರಶಸ್ತಿಗಳು ಸೇರಿವೆ.

ಚಿರತೆಯೊಂದಿಗೆ ಹೋರಾಡಿ ತನ್ನ ಸ್ನೇಹಿತನ ಜೀವ ಉಳಿಸಿದ 18 ವರ್ಷದ ಮೋಹಿತ್ ಚಂದ್ರ ಉಪ್ರೇಟಿ ಅವರಿಗೆ 2020ನೇ ಸಾಲಿನ ಮಾರ್ಕಂಡೇಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

2021ನೇ ಸಾಲಿನ ಇದೇ ಪ್ರಶಸ್ತಿಯನ್ನು ಛತ್ತೀಸಗಢದ 16 ವರ್ಷದ ಅಮನ್ ಜ್ಯೋತಿ ಜಾಹಿರೆ ಎಂಬ ಬಾಲಕನಿಗೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.