ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಯುಪಡೆಯ ವಿಮಾನ ಅಪಘಾತ: 56 ವರ್ಷಗಳ ಬಳಿಕ ಮೃತದೇಹ ಪತ್ತೆ

Published : 30 ಸೆಪ್ಟೆಂಬರ್ 2024, 16:28 IST
Last Updated : 30 ಸೆಪ್ಟೆಂಬರ್ 2024, 16:28 IST
ಫಾಲೋ ಮಾಡಿ
Comments

ನವದೆಹಲಿ: 56 ವರ್ಷಗಳ ಹಿಂದೆ ಭಾರತೀಯ ವಾಯುಪಡೆಯ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಯೋಧರಲ್ಲಿ ನಾಲ್ವರ ಮೃತದೇಹ ಪತ್ತೆಹಚ್ಚಲಾಗಿದೆ. ಈ ಮೂಲಕ ಸುದೀರ್ಘ ಅವಧಿಯಿಂದ ನಡೆಯುತ್ತಿರುವ ಶೋಧ ಕಾರ್ಯಾಚರಣೆಗೆ ಗಮನಾರ್ಹ ಯಶಸ್ಸು ಸಿಕ್ಕಂತಾಗಿದೆ.

ಭಾರತೀಯ ವಾಯುಪಡೆಯ ಎಎನ್‌–12 ವಿಮಾನವು 1968ರ ಫೆಬ್ರುವರಿ 7ರಂದು ಹಿಮಾಚಲ ಪ್ರದೇಶದ ರೋಹ್ತಾಂಗ್ ಪಾಸ್‌ ಬಳಿ ಪತನಗೊಂಡಿತ್ತು. ಚಂಡೀಗಢದಿಂದ ಲೇಹ್‌ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ 102 ಮಂದಿ ಇದ್ದರು.

ಭಾರತೀಯ ಸೇನೆಯ ಡೋಗ್ರಾ ಸ್ಕೌಟ್ಸ್‌ ಮತ್ತು ತಿರಂಗಾ ಮೌಂಟೇನ್‌ ರೆಸ್ಕ್ಯೂ ತಂಡಗಳ ಸಿಬ್ಬಂದಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೃತದೇಹಗಳು ಪತ್ತೆಯಾಗಿವೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಮಾನದ ಅವಶೇಷವನ್ನು 2003 ರಲ್ಲಿ ಪತ್ತೆಹಚ್ಚಲಾಗಿದ್ದರೆ, 2019ರ ವರೆಗೆ ಕೇವಲ ಐವರ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಈಗ ಪತ್ತೆಯಾಗಿರುವ ಮೃತದೇಹಗಳು ಮಲ್ಖಾನ್‌ ಸಿಂಗ್, ನಾರಾಯಣ್ ಸಿಂಗ್‌ ಮತ್ತು ಥಾಮಸ್‌ ಚರಣ್‌ ಅವರದ್ದು ಎಂದು ಗುರುತಿಸಲಾಗಿದೆ. ಇನ್ನೊಂದು ಮೃತದೇಹದ ಗುರುತು ಪತ್ತೆಯಾಗಿಲ್ಲ.

‘ಚರಣ್‌ ಅವರು ಕೇರಳದ ಪತ್ತನಂತಿಟ್ಟ ಜಿಲ್ಲೆಯ ಇಲಂದೂರ್‌ನವರಾಗಿದ್ದು, ಮೃತದೇಹ ಪತ್ತೆಯಾಗಿರುವ ವಿಷಯವನ್ನು ಅವರ ತಾಯಿಗೆ ತಿಳಿಸಲಾಗಿದೆ. ನಾರಾಯಣ್‌ ಅವರು ಉತ್ತರಾಖಂಡದ ಗಢವಾಲ್‌ನವರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT