ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ವರ್ಷಗಳಲ್ಲಿ ಶೇ 60ರಷ್ಟು ಪಕ್ಷಿ ಪ್ರಭೇದಗಳ ಕುಸಿತ: ವರದಿ 

Published 26 ಆಗಸ್ಟ್ 2023, 0:24 IST
Last Updated 26 ಆಗಸ್ಟ್ 2023, 0:24 IST
ಅಕ್ಷರ ಗಾತ್ರ

ನವದೆಹಲಿ: ಭಾರತದ 338 ಪಕ್ಷಿ ಪ್ರಭೇದಗಳ ಸಂಖ್ಯೆಯಲ್ಲಿ ಈ 30 ವರ್ಷಗಳಲ್ಲಿ ಆಗಿರುವ ಬದಲಾವಣೆಯನ್ನು ಅಧ್ಯಯನ ಮಾಡಲಾಗಿದ್ದು, ಶೇ 60ರಷ್ಟು ಪಕ್ಷಿ ಪ್ರಬೇಧಗಳ ಸಂಖ್ಯೆಯಲ್ಲಿ ಕುಸಿತವಾಗಿರುವುದು ಬಹಿರಂಗವಾಗಿದೆ. ದೇಶದ ಸುಮಾರು 30,000 ಪಕ್ಷಿ ವೀಕ್ಷಕರು ಒದಗಿಸಿರುವ ದತ್ತಾಂಶಗಳನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ. 

ಇದರ ಜತೆಗೆ, 359 ಪಕ್ಷಿ ಪ್ರಬೇಧಗಳ ಸಂಖ್ಯೆಯಲ್ಲಿ 7 ವರ್ಷಗಳಲ್ಲಿ ಆಗಿರುವ ಬದಲಾವಣೆಯನ್ನು ಮೌಲ್ಯಮಾಪನ ಮಾಡಲಾಗಿದ್ದು, ಶೇ 40ರಷ್ಟು (142) ಪಕ್ಷಗಳ ಸಂಖ್ಯೆಯಲ್ಲಿ ಕುಸಿತವಾಗಿದೆ ಎಂದು ‘ಸ್ಟೇಟ್‌ ಆಫ್‌ ಇಂಡಿಯಾಸ್‌ ಬರ್ಡ್ಸ್‌ (ಭಾರತದ ಪಕ್ಷಿಗಳ ಸ್ಥಿತಿ)’ ಎಂಬ ಹೆಸರಿನ ಶೀರ್ಷಿಕೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಮೂರು ಅಂಶಗಳ ಆಧಾರದ ಮೇಲೆ ಈ ಮೌಲ್ಯಮಾಪನ ಮಾಡಲಾಗಿದೆ. ಈ ಮೂರು ಅಂಶಗಳ ಪೈಕಿ ಎರಡು ಅಂಶಗಳು ಜೀವಿಗಳ ಸಂಖ್ಯೆಯ ಬದಲಾವಣೆಗೆ ಸಂಬಂಧಿಸಿದ್ದಾಗಿವೆ. ದೀರ್ಘಾವಧಿಯ (30 ವರ್ಷಗಳಲ್ಲಿ ಬದಲಾವಣೆ) ಮತ್ತು ವಾರ್ಷಿಕ (ಕಳೆದ ಏಳು ವರ್ಷಗಳಲ್ಲಿ ಬದಲಾವಣೆ), ಭಾರತದಲ್ಲಿನ ಹಂಚಿಕೆಯನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ. 

ಮೌಲ್ಯಮಾಪನ ಮಾಡಲಾದ ಒಟ್ಟು 942 ಪಕ್ಷಿ ಪ್ರಭೇದಗಳ ಪೈಕಿ 338 ಪ್ರಭೇದಗಳನ್ನು ದೀರ್ಘಾವಧಿಯ ಬದಲಾವಣೆಯ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇವುಗಳಲ್ಲಿ 204 ಪ್ರಭೇದಗಳು ಕ್ಷೀಣಿಸಿವೆ. 98 ಸ್ಥಿರವಾಗಿವೆ ಮತ್ತು 36 ಹೆಚ್ಚಾಗಿವೆ ಎಂದು ‘ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್‌ಎಚ್‌ಎಸ್‌)’, ‘ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಡಬ್ಲ್ಯುಐಐ)’, ‘ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾ (ಝಡ್‌ಎಸ್‌ಐ)’ ಸೇರಿದಂತೆ 13 ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ತಂಡ ಪ್ರಕಟಿಸಿರುವ ವರದಿಯಲ್ಲಿ ಹೇಳಲಾಗಿದೆ. 

359 ಪಕ್ಷಿ ಪ್ರಬೇಧಗಳನ್ನು ಏಳು ವರ್ಷಗಳ ಕಡಿಮೆ ಅವಧಿಯ ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಈ ಪೈಕಿ 142 ಪಕ್ಷಿಗಳ ಪ್ರಬೇಧಗಳ ಸಂಖ್ಯೆ ಕುಸಿದಿದೆ (64 ಬಗೆಯ ಪಕ್ಷಿಗಳ ಸಂಖ್ಯೆ ಅತಿ ವೇಗವಾಗಿ ಕುಸಿದಿದೆ). 189 ಬಗೆಯ ಪಕ್ಷಗಳ ಸಂಖ್ಯೆ ಸ್ಥಿರವಾಗಿದ್ದು, 28ರಲ್ಲಿ ಹೆಚ್ಚಳವಾಗಿದೆ. 

‘ನಾರ್ದರ್ನ್ ಶೊವೆಲರ್’, ‘ನಾರ್ದರ್ನ್ ಪಿನ್‌ಟೈಲ್’, ‘ಕಾಮನ್ ಟೇಲ್’, ‘ಟಫ್ಟೆಡ್ ಡಕ್’, ‘ಗ್ರೇಟರ್ ಫ್ಲೆಮಿಂಗೊ’, ‘ಸಾರಸ್ ಕ್ರೇನ್’, ‘ಇಂಡಿಯನ್ ಕೋರ್ಸರ್’ ಮತ್ತು ‘ಅಂಡಮಾನ್ ಸರ್ಪೆಂಟ್‌ ಈಗಲ್‌’ ಸೇರಿದಂತೆ 178 ಜಾತಿ ಪಕ್ಷಿಗಳನ್ನು ಸಂರಕ್ಷಣೆ ಅಗ್ಯವಿರುವ ಜೀವಿಗಳೆಂದು ವರ್ಗೀಕರಿಸಿದೆ. 

‘ಇಂಡಿಯನ್ ರೋಲರ್’, ‘ಕಾಮನ್ ಟೇಲ್’, ‘ನಾರ್ದರ್ನ್ ಶೊವೆಲರ್’ ಮತ್ತು ‘ಕಾಮನ್ ಸ್ಯಾಂಡ್‌ಪೈಪರ್’ ಸೇರಿದಂತೆ ಹದಿನಾಲ್ಕು ಪ್ರಭೇದಗಳ ಸಂಖ್ಯೆಯಲ್ಲಿ ಶೇಕಡಾ 30 ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕುಸಿತವುಂಟಾಗಿದೆ ಎಂದು ವಿವರಿಸಲಾಗಿದೆ. ‘ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (ಐಯುಸಿಎನ್‌)’ನ ಕೆಂಪು ಪಟ್ಟಿಗೆ ಶಿಫಾರಸು ಮಾಡಲಾಗಿದೆ ಎಂದು ವರದಿ ಹೇಳುತ್ತದೆ.

‘ಫೆರಲ್ ರಾಕ್ ಪಿಜನ್‌’, ‘ಆಶಿ ಪ್ರಿನಿಯಾ’, ‘ಏಷ್ಯನ್ ಕೋಯೆಲ್’ ಮತ್ತು ‘ಇಂಡಿಯನ್ ಪೀಫೌಲ್’ ಮುಂತಾದ ಸಾಮಾನ್ಯ ಜಾತಿ ಪಕ್ಷಿಗಳು ಉತ್ತಮ ಸ್ಥಿತಿಯಲ್ಲಿವೆ ಎನ್ನಲಾಗಿದೆ. 

ಹುಲ್ಲುಗಾವಲುಗಳು, ಜೌಗು ಪ್ರದೇಶಗಳು ಮತ್ತು ಕಾಡುಪ್ರದೇಶಗಳ ಪಕ್ಷಿಗಳು ವೇಗವಾಗಿ ಕ್ಷೀಣಿಸುತ್ತಿವೆ ಎಂಬ ಆತಂಕ ವ್ಯಕ್ತವಾಗಿದೆ.   

ಸಸ್ಯ ಮತ್ತು ಮಾಂಸ ಎರಡನ್ನೂ ತಿನ್ನುವ ಮತ್ತು ಹಣ್ಣು–ಮಕರಂದ ಹೀರುವ ಪಕ್ಷಿಗಳಿಗೆ ಹೋಲಿಸಿದರೆ, ಮಾಂಸಹಾರಿ, ಕೀಟಹಾರಿ, ಕಾಳುತಿನ್ನುವ ಪಕ್ಷಿಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗುತ್ತಿದೆ ಎಂದು ವರದಿ ಹೇಳಿದೆ. 

ಮೂಲ ಪಕ್ಷಿಗಳಿಗಿಂತಲೂ, ವಲಸಿಗ ಪಕ್ಷಗಳು ಅತಿ ಅಪಾಯಕ್ಕೆ ಸಿಲುಕಿವೆಯಾದರೂ, ಪಶ್ಚಿಮ ಘಟ್ಟ– ಶ್ರೀಲಂಕಾ ವಲಯಕ್ಕೆ ಸೀಮಿತವಾದ ಪಕ್ಷಿ ಪ್ರಭೇದಗಳು ಮಾತ್ರ ಅಳಿವಿನಂಚಿಗೆ ಸರಿಯುತ್ತಿವೆ. ಈ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

‘ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾದ ಪಕ್ಷಿ ಪ್ರಬೇಧಗಳು ಕ್ಷೀಣಿಸುತ್ತಿವೆ. ಅವುಗಳ ಉಳಿವು ನಮ್ಮ ಕೈಯಲ್ಲಿದೆ‘ ಎನ್ನುತ್ತಾರೆ ನೇಚರ್‌ ಕನ್ಸರವೇಷನ್‌ ಫೌಂಡೇಷನ್‌ನ ಕಾರ್ಯಕಾರಿ ನಿರ್ದೇಶಕ ಎಂ. ಆನಂದ ಕುಮಾರ್‌ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT