ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

75ನೇ ಸ್ವಾತಂತ್ರ್ಯೋತ್ಸವ: ಮನೆಯಲ್ಲಿ ಧ್ವಜಾರೋಹಣ ಮಾಡಿ- ಜನತೆಗೆ ಪಿಎಂ ಮೋದಿ ಕರೆ

Last Updated 22 ಜುಲೈ 2022, 5:12 IST
ಅಕ್ಷರ ಗಾತ್ರ

ನವದೆಹಲಿ: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರದ ಜನತೆಗೆ ಕರೆ ನೀಡಿದ್ದಾರೆ. 'ಹರ್‌ ಘರ್‌ ತಿರಂಗ' ಆಂದೋಲನವನ್ನು ಬಲಪಡಿಸಲು ಆಗಸ್ಟ್‌ 13-15ರ ನಡುವೆ ರಾಷ್ಟ್ರಧ್ವಜವನ್ನು ಮನೆಯಲ್ಲಿ ಆರೋಹಣ ಅಥವಾ ಪ್ರದರ್ಶನ ಮಾಡಬೇಕು ಎಂದಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ಈ ಆಂದೋಲನವು ನಮ್ಮ ತ್ರಿವರ್ಣ ಧ್ವಜದ ಜೊತೆಗಿನ ಬಾಂಧವ್ಯವನ್ನು ವೃದ್ಧಿಸುತ್ತದೆ. 1947ರ ಜುಲೈ 22ರಂದು ರಾಷ್ಟ್ರ ಧ್ವಜವನ್ನು ಅಂಗೀಕರಿಸಲಾಯಿತು ಎಂದು ಸ್ಮರಿಸಿದ್ದಾರೆ.

ಸ್ವತಂತ್ರ ಭಾರತದ ಧ್ವಜದ ಕನಸು ಕಂಡ ಎಲ್ಲರ ಪ್ರಯತ್ನದ ಮತ್ತು ಶೌರ್ಯದ ಸ್ಮರಣೆಯನ್ನು ನಾವಿಂದು ಮಾಡುತ್ತಿದ್ದೇವೆ. ಅವರ ಕನಸಿನಂತೆ ರಾಷ್ಟ್ರವನ್ನು ಸದೃಢವಾಗಿಸಲು ಬದ್ಧರಾಗಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ.

'ನಾವು ಈ ವರ್ಷ 'ಆಜಾದಿ ಕಾ ಅಮೃತ ಮಹೋತ್ಸವ'ವನ್ನು ಆಚರಿಸುತ್ತಿದ್ದೇವೆ. ಹರ್‌ ಘರ್‌ ತಿರಂಗ ಆಂದೋಲನವನ್ನು ಪ್ರಬಲಗೊಳಿಸೋಣ. ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಆಗಸ್ಟ್‌ 13 ಮತ್ತು 15ರ ನಡುವೆ ಆರೋಹಣ ಅಥವಾ ಪ್ರದರ್ಶನ ಮಾಡೋಣ. ಈ ಆಂದೋಲನವು ರಾಷ್ಟ್ರ ಧ್ವಜದೊಂದಿಗಿರುವ ನಮ್ಮ ಬಾಂಧವ್ಯವನ್ನು ಮತ್ತಷ್ಟು ಆಳವಾಗಿಸುತ್ತದೆ' ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ತ್ರಿವರ್ಣ ಧ್ವಜ ಅಂಗೀಕಾರದ ಆಸಕ್ತಿಕರ ಮಾಹಿತಿಯನ್ನು ಹಂಚಿಕೊಂಡಿರುವ ನರೇಂದ್ರ ಮೋದಿ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಅನಾವರಣಗೊಳಿಸಿದ ಮೊದಲ ತ್ರಿವರ್ಣ ಧ್ವಜದ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ.

ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೇಂದ್ರ ಸರ್ಕಾರವು 'ಹರ್‌ ಘರ್‌ ತಿರಂಗ'(ಪ್ರತಿಯೊಬ್ಬರ ಮನೆಯಲ್ಲಿ ತ್ರಿವರ್ಣ ಧ್ವಜ) ಆಂದೋಲನವನ್ನು ಹಮ್ಮಿಕೊಂಡಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT