ಝಾನ್ಸಿ, ಉತ್ತರ ಪ್ರದೇಶ: ಸಹಪಾಠಿಯಾಗಿದ್ದ ಬಾಲಕಿಗೆ ಬೆದರಿಕೆವೊಡ್ಡಿ, ಅತ್ಯಾಚಾರ ಎಸಗಿದ ಆರೋಪದಡಿ ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ಎಂಟು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಇವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

‘ಬಂಧಿತರ ಪೈಕಿ ಒಬ್ಬ ಅತ್ಯಾಚಾರ ಎಸಗಿದ್ದಾನೆ. ಇತರರು ಹೊರಗಡೆ ಕಾಯುತ್ತಿದ್ದರು. ಆ ಸಂದರ್ಭದಲ್ಲಿ ಕ್ಯಾಂಪಸ್‌ನಲ್ಲಿ ಪರೀಕ್ಷೆ ನಡೆಯತ್ತಿದ್ದು, ಉಪನ್ಯಾಸಕರು ಪರೀಕ್ಷೆ ಕಾರ್ಯ ದಲ್ಲಿ ನಿರತರಾಗಿದ್ದರು’ ಎಂದು ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ತಿಳಿಸಿದ್ದಾರೆ.

ಕೃತ್ಯ ನಡೆದ ಹಾಸ್ಟೆಲ್ ಕಾಲೇಜು ಕಟ್ಟಡಕ್ಕಿಂತಲೂ ದೂರ ಇದ್ದ ಕಾರಣ ಈ ಕೃತ್ಯ ಯಾರ ಗಮನಕ್ಕೂ ಬಂದಿಲ್ಲ. ವಿದ್ಯಾರ್ಥಿಗಳು ಬೆದರಿಕೆಯೊಡ್ಡಿ ಬಾಲಕಿಯಿಂದ ₹ 3000 ಸುಲಿಗೆ ಮಾಡಿದ್ದಾರೆ. ಬಂಧಿತರ ವಿರುದ್ಧ ಬಾಲಕಿಯೇ ದೂರು ನೀಡಿದ್ದಾಳೆ ಎಂದು ತಿಳಿಸಿದ್ದಾರೆ.

ಎಲ್ಲ ಎಂಟು ಮಂದಿಯನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ. ಇವರ ವಿರುದ್ಧ ಐಪಿಸಿ ಮತ್ತು ಪೋಕ್ಸೊ ಅನ್ವಯ ಮೊಕದ್ದಮೆ ದಾಖಲಿಸಲಾಗುವುದು. ಹಾಸ್ಟೆಲ್ ಮುಚ್ಚಿದ್ದರೂ ವಿದ್ಯಾರ್ಥಿಗಳು ಅಲ್ಲಿಗೆ ತೆರಳಿದ್ದಾದರೂ ಹೇಗೆ ಎಂಬ ಬಗ್ಗೆಯೂ ತನಿಖೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಎ.ವಂಶಿ ಅವರು, ಎಲ್ಲ ಆರೋಪಿ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರ ಹಾಕುವಂತೆಯೂ ಆದೇಶಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.