ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ರಾಮ ಮಂದಿರದ ಪರಿಕಲ್ಪನೆಯಲ್ಲಿ ವಜ್ರದ ಹಾರ ತಯಾರಿಸಿದ ಗುಜರಾತ್ ವ್ಯಾಪಾರಿ

Published 19 ಡಿಸೆಂಬರ್ 2023, 3:37 IST
Last Updated 19 ಡಿಸೆಂಬರ್ 2023, 3:37 IST
ಅಕ್ಷರ ಗಾತ್ರ

ಸೂರತ್: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯುತ್ತಿದ್ದು, ರಾಮ ಭಕ್ತರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ.

ಗುಜರಾತ್‌ ರಾಜ್ಯದ ಸೂರತ್‌ನ ವಜ್ರದ ವ್ಯಾಪಾರಿಯೊಬ್ಬರು ರಾಮ ಮಂದಿರದ ಪರಿಕಲ್ಪನೆಯಲ್ಲಿ ವಜ್ರದ ಹಾರವನ್ನು ತಯಾರಿಸಿದ್ದಾರೆ. ಈ ಸಂಪೂರ್ಣ ವಿನ್ಯಾಸದಲ್ಲಿ ಅಮೆರಿಕದ 5,000 ವಜ್ರಗಳನ್ನು ಬಳಸಲಾಗಿದೆ.

ವಜ್ರದ ಹಾರದಲ್ಲಿ 2 ಕೆಜಿ ಬೆಳ್ಳಿಯನ್ನು ಸಹ ಬಳಕೆ ಮಾಡಲಾಗಿದ್ದು, 40 ಕುಶಲಕರ್ಮಿಗಳು 35 ದಿನಗಳಲ್ಲಿ ತಯಾರಿಸಿದ್ದಾರೆ.

‘ಈ ಹಾರವು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಅಲ್ಲ, ನಾವು ಅದನ್ನು ರಾಮಮಂದಿರಕ್ಕೆ ಉಡುಗೊರೆಯಾಗಿ ನೀಡಲು ಬಯಸಿದ್ದೇವೆ’ ಎಂದು ವ್ಯಾಪಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT