ನವದೆಹಲಿ: ಆಧಾರ್ ಕಾರ್ಡ್‌ಗಳ ಉಚಿತ ನವೀಕರಣಕ್ಕೆ ನೀಡಿದ್ದ ಗಡುವನ್ನು ಡಿಸೆಂಬರ್ 14ರವರೆಗೆ ವಿಸ್ತರಿಸಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಪ್ರಕಟಣೆ ಹೊರಡಿಸಿದೆ.
10 ವರ್ಷಗಳ ಹಿಂದೆ ನೀಡಲಾದ ಆಧಾರ ಕಾರ್ಡ್‌ಗಳ ಉಚಿತ ನವೀಕರಣಕ್ಕೆ ಸೆ.14 ಕೊನೆಯ ದಿನವಾಗಿತ್ತು. ಈ ಗಡುವನ್ನು ವಿಸ್ತರಿಸಲಾಗಿದೆ.
ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ UIDAI, ‘ಲಕ್ಷಾಂತರ ಆಧಾರ್ ಸಂಖ್ಯೆ ಹೊಂದಿರುವವರಿಗೆ ಪ್ರಯೋಜನವಾಗುವಂತೆ ಉಚಿತ ಆನ್‌ಲೈನ್ ಡಾಕ್ಯುಮೆಂಟ್ ಅಪ್‌ಲೋಡ್ ಸೌಲಭ್ಯವನ್ನು 2024ರ ಡಿ.14ರವರೆಗೆ ವಿಸ್ತರಿಸಿದೆ. ಈ ಉಚಿತ ಸೇವೆಯು #myAadhaar ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿದೆ’ ಎಂದು ಬರೆದುಕೊಂಡಿದೆ.
ಗಡುವು ಮುಗಿದ ಬಳಿಕ ₹50 ಹಣ ಪಾವತಿಸಿ ಆಧಾರ್ ಕಾರ್ಡ್ ನವೀಕರಣ ಮಾಡಬೇಕಾಗುತ್ತದೆ.
ಬಯೋಮೆಟ್ರಿಕ್ಸ್ ಹೊರತುಪಡಿಸಿ ಆಧಾರ್ ಕಾರ್ಡ್‌ನಲ್ಲಿ ಇತರ ಬದಲಾವಣೆಗಳನ್ನೂ ಆನ್‌ಲೈನ್‌ನಲ್ಲಿ ಮಾಡಬಹುದು. ಹೆಚ್ಚಿನ ಸಹಾಯಕ್ಕಾಗಿ ನೀವು ಹತ್ತಿರದ UIDAI ಕೇಂದ್ರ/ಆಧಾರ್ ಸೇವಾ ಕೇಂದ್ರವನ್ನು ಸಹ ಭೇಟಿ ಮಾಡಬಹುದು ಎಂದು ಪ್ರಾಧಿಕಾರ ಹೇಳಿದೆ.
ಆಧಾರ್ ಕಾರ್ಡ್ ನವೀಕರಣ ಹೇಗೆ?
ಅಧಿಕೃತ UIDAI ವೆಬ್‌ಸೈಟ್‌ಗೆ (myaadhaar.uidai.gov.in) ಹೋಗಿ, ನಿಮ್ಮ ಆಧಾರ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಲಾಗ್ ಇನ್ ಮಾಡಿ. ಸೈಟ್ ಅನ್ನು ನ್ಯಾವಿಗೇಟ್ ಮಾಡಲು ನಿಮ್ಮ ಆದ್ಯತೆಯ ಭಾಷೆಯನ್ನು ನೀವು ಆಯ್ಕೆ ಮಾಡಬಹುದು.
ನಿಮ್ಮ ಪ್ರಸ್ತುತ ಬಯೋಮೆಟ್ರಿಕ್ ಮತ್ತು ಇತರ ವಿವರಗಳನ್ನು ವೀಕ್ಷಿಸಲು 'ಆಧಾರ್ ಅಪ್‌ಡೇಟ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ವಿವರಗಳು ಸರಿಯಾಗಿದ್ದರೆ, ಮಾಹಿತಿ ಸರಿಯಾಗಿದೆ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ನೀವು ನವೀಕರಿಸಲು ಬಯಸುವ ವಿವರಗಳನ್ನು ಆಯ್ಕೆಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಬದಲಾವಣೆಗಾಗಿ ವಿನಂತಿಯನ್ನು ಸಲ್ಲಿಸಿ.
#UIDAI extends free online document upload facility till 14th December 2024; to benefit millions of Aadhaar Number Holders. This free service is available only on #myAadhaar portal. UIDAI has been encouraging people to keep documents updated in their #Aadhaar. pic.twitter.com/ThB14rWG0h
— Aadhaar (@UIDAI) September 14, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.