ಮುಂಬೈ (ಪಿಟಿಐ): ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ನಟ ಆದಿತ್ಯ ಪಂಚೋಲಿ ನನಗೆ ಬ್ಲ್ಯಾಕ್‌ಮೇಲ್ ಮಾಡಿದ್ದರು ಎಂದು ಬಾಲಿವುಡ್‌ನ ಜನಪ್ರಿಯ ನಟಿಯೊಬ್ಬರು ಆರೋಪಿಸಿದ್ದಾರೆ.

ಈ ನಟಿ ಒಂದು ತಿಂಗಳ ಹಿಂದೆ ಆದಿತ್ಯ ಪಂಚೋಲಿ ವಿರುದ್ಧ ಅತ್ಯಾಚಾರ ಆರೋಪದ ದೂರು ದಾಖಲಿಸಿದ್ದರು.

‘2004ರಲ್ಲಿ ಸಿನಿಮಾಗಳ ಅವಕಾಶ ಅರಸಿ ಮುಂಬೈಗೆ ಬಂದ ಹೊಸತರಲ್ಲಿ ಪಂಚೋಲಿ ಪರಿಚಯವಾಯಿತು. ಅದೇ ವರ್ಷ ಅವರೊಂದಿಗೆ ಪಾರ್ಟಿಗೆ ಹೋಗಿದ್ದೆ. ಅಲ್ಲಿ ಪಾನೀಯ ಸೇವಿಸಿದ ಬಳಿಕ ತಲೆತಿರುಗಿದ್ದಂತೆ ಆಯಿತು. ಪಂಚೋಲಿ, ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿರಬಹುದು. ಮನೆಗೆ ನನ್ನನ್ನು ಡ್ರಾಪ್ ಮಾಡುವ ವೇಳೆ ಕಾರನ್ನು ದಾರಿಯಲ್ಲಿ ನಿಲ್ಲಿಸಿ, ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು. ಈ ವೇಳೆ ನನಗೆ ತಿಳಿಯದ್ದಂತೆ ಫೋಟೊ ತೆಗೆದುಕೊಂಡಿದ್ದಾರೆ’ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.

ಪುನಃ ಭೇಟಿಯಾದಾಗ ನಾವಿಬ್ಬರೂ, ಗಂಡ, ಹೆಂಡತಿ ರೀತಿಯಲ್ಲಿ ಬದುಕು ನಡೆಸೋಣ ಎಂದು ಹೇಳಿದರು. ಅದಕ್ಕೆ ನಾನು ಒಪ್ಪಲಿಲ್ಲ. ನೀವು ನನ್ನ ಅಪ್ಪನ ವಯಸ್ಸಿನವರು ಎಂದು ಹೇಳಿದೆ. ಅದಕ್ಕವರು, ಫೋಟೊ ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿದರು ಎಂದು ಆರೋಪಿಸಿದ್ದಾರೆ.

‘ಆ ಸಮಯದಲ್ಲಿ ನಾನು ತುಂಬಾ ಚಿಕ್ಕವಳು. ನನಗೆ ಮುಂಬೈನಲ್ಲಿ ಯಾರ ಪರಿಚಯವೂ ಇರಲಿಲ್ಲ. ಪಂಚೋಲಿ ಅದರ ಪ್ರಯೋಜನ ಪಡೆದುಕೊಂಡರು’ ಎಂದು 36 ವರ್ಷದ ನಟಿ ದೂರಿದ್ದಾರೆ.

ಎಫ್‌ಐಆರ್ ದಾಖಲಾದ ನಂತರ ಪಂಚೋಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ದಿಂಡೋಶಿ ಸೆಷನ್ಸ್ ಕೋರ್ಟ್ ಪಂಚೋಲಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಮುಂದಿನ ವಿಚಾರಣೆ ಜುಲೈ 19ಕ್ಕೆ ನಡೆಯಲಿದೆ.

ನಟಿಯ ದೂರಿನ ಮೇರೆಗೆ ಪಂಚೋಲಿ ವಿರುದ್ಧ ಭಾರತೀಯ ದಂಡ ಸಂಹಿತೆ ಅನ್ವಯ 376(ಅತ್ಯಾಚಾರ), 328 (ವಿಷ ತಿನಿಸುವುದು), 384 (ಸುಲಿಗೆ), 342 (ಅಕ್ರಮವಾಗಿ ಸೆರೆ ಇರಿಸಿಕೊಳ್ಳುವುದು), 323, 506 (ಅಪರಾಧದ ಬೆದರಿಕೆ) ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ.ಪಂಚೋಲಿ (54) ಈ ಆರೋಪಗಳನ್ನು ನಿರಾಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.