ನವದೆಹಲಿ: ಭೂಕಂಪದ ಸುದ್ದಿ ತಿಳಿಯುತ್ತಿದ್ದಂತೆ ನವದೆಹಲಿಯಲ್ಲಿ ವಾಸವಾಗಿರುವ ಅಫ್ಗಾನಿಸ್ತಾನದ ವಲಸಿಗರು ಭಾನುವಾರ ಇಡೀ ರಾತ್ರಿ ನಿದ್ರೆಯಿಲ್ಲದೆ ಕಳೆದರು. ತಮ್ಮ ಪುಟ್ಟ ಅಂಗಡಿಗಳು, ಬಾಡಿಗೆ ಕೋಣೆಗಳಲ್ಲಿ ಮೊಬೈಲ್ ಹಿಡಿದುಕೊಂಡು ಕುಳಿತಿದ್ದ ಅವರು ಅಫ್ಗಾನಿಸ್ತಾನದಲ್ಲಿರುವ ತಮ್ಮ ಕುಟುಂಬಸ್ಥರು, ಬಂಧುಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಲೇ ಇದ್ದರು. ಭೂಕಂಪದ ಬೆನ್ನಲ್ಲೇ ದೂರವಾಣಿ ಸಂಪರ್ಕ ಸ್ಥಗಿತಗೊಂಡಿದ್ದು ವಲಸಿಗರ ಆತಂಕ ಹೆಚ್ಚಿಸಿತ್ತು.

‘ನನ್ನ ಕುಟುಂಬವು ಭೂಕಂಪ ಸಂಭವಿಸಿರುವ ಜಲಾಲಾಬಾದ್ ನಗರದಲ್ಲಿ ನೆಲಸಿದೆ. ಅಲ್ಲಿ ಅವರಿಗೆ ಏನಾಗಿದೆಯೋ ಗೊತ್ತಿಲ್ಲ. ಮೊಬೈಲ್ ಸಂಪರ್ಕವೂ ಸಾಧ್ಯವಾಗುತ್ತಿಲ್ಲ’ ಎಂದು ದೆಹಲಿಯಲ್ಲಿ ಒಣ ಹಣ್ಣುಗಳ ವ್ಯಾಪಾರಿಯಾಗಿರುವ ಅಫ್ಗಾನಿಸ್ತಾನದ 20 ವರ್ಷದ ಯುವಕ ಅಸೀಮ್ ಆತಂಕದಿಂದ ನುಡಿದರು.
.ಅಫ್ಗಾನಿಸ್ತಾನ | 6.0 ತೀವ್ರತೆಯ ಪ್ರಬಲ ಭೂಕಂಪ: 800ರ ಗಡಿ ದಾಟಿದ ಸಾವಿನ ಸಂಖ್ಯೆ.ಅಫ್ಗಾನಿಸ್ತಾನ ಬಸ್ ದುರಂತ: 76 ಮಂದಿ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.