ನವದೆಹಲಿ: ಅಫ್ಗಾನಿಸ್ತಾನದ ಭೂಕಂಪ ಪೀಡಿತ ಪ್ರದೇಶದ ಜನರ ನೆರವಿಗಾಗಿ ಭಾರತವು 21 ಟನ್ಗಳಷ್ಟು ಪರಿಹಾರ ಸಾಮಗ್ರಿಗಳನ್ನು ತಲುಪಿಸಿದೆ. ಪೂರ್ವ ಅಫ್ಗಾನಿಸ್ತಾನದಲ್ಲಿ ಭಾನುವಾರ ಸಂಭವಿಸಿದ 6.0 ತೀವ್ರತೆಯ ಭೂಕಂಪನದಿಂದಾಗಿ ಸುಮಾರು 1,400 ಜನರು ಮೃತಪಟ್ಟಿದ್ದು, 2,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

‘ಭಾರತದ ಭೂಕಂಪ ಪರಿಹಾರ ನೆರವು ವಿಮಾನದ ಮೂಲಕ ಕಾಬೂಲ್ ತಲುಪಿದೆ. ಭಾರತವು ಪರಿಸ್ಥಿತಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಲಿದೆ ಮತ್ತು ಮುಂಬರುವ ದಿನಗಳಲ್ಲಿ ಹೆಚ್ಚಿನ ಮಾನವೀಯ ನೆರವು ಕಳುಹಿಸಲಿದೆ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಕಂಬಳಿಗಳು, ಡೇರೆಗಳು, ಸ್ವಚ್ಛತಾ ಸಾಮಗ್ರಿಗಳ ಕಿಟ್ಗಳು, ನೀರು ಸಂಗ್ರಹ ಟ್ಯಾಂಕ್ಗಳು, ಜನರೇಟರ್ಗಳು, ಅಡುಗೆ ಪಾತ್ರೆಗಳು, ನೀರು ಶುದ್ಧೀಕರಣ ಘಟಕಗಳು, ಸ್ಲೀಪಿಂಗ್ ಬ್ಯಾಗ್ಗಳು, ಅತ್ಯಗತ್ಯ ಔಷಧಗಳು, ವೀಲ್ಚೇರ್ಗಳು, ಹ್ಯಾಂಡ್ ಸ್ಯಾನಿಟೈಸರ್ಗಳು, ವೈದ್ಯಕೀಯ ಉಪಕರಣಗಳು ಸೇರಿದಂತೆ 21 ಟನ್ ಪರಿಹಾರ ಸಾಮಗ್ರಿಗಳನ್ನು ಮಂಗಳವಾರ ಕಳುಹಿಸಿಲಾಗಿದೆ ಎಂದು ಸಚಿವ ಜೈಶಂಕರ್ ಹೇಳಿದ್ದಾರೆ.
.ಅಫ್ಗಾನಿಸ್ತಾನ | 6.0 ತೀವ್ರತೆಯ ಪ್ರಬಲ ಭೂಕಂಪ: 1,400ರ ಗಡಿ ದಾಟಿದ ಸಾವಿನ ಸಂಖ್ಯೆ.ಅಫ್ಗಾನಿಸ್ತಾನದಲ್ಲಿ ಮತ್ತೆ ಭೂಕಂಪ: 5.2ರಷ್ಟು ತೀವ್ರತೆ ದಾಖಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.