ಜಲಾಲಾಬಾದ್: ‘ನಮ್ಮ ಇಡೀ ಮನೆ ಕುಸಿದು ಬಿತ್ತು. ನನ್ನ ಸಹೋದರರು, ತಂದೆ ಎಲ್ಲರೂ ಅವಶೇಷಗಳ ಅಡಿಯಲ್ಲಿ ಸಿಲುಕಿದರು. ನಾನೊಬ್ಬನೇ ಬದುಕುಳಿದಿದೆ’–ನಂಗರಹಾರ್ನಲ್ಲಿ ಭೂಕಂಪದಿಂದ ತನ್ನ ಕುಟುಂಬದ ಐವರನ್ನೂ ಕಳೆದುಕೊಂಡಿರುವ 14 ವರ್ಷದ ಬಾಲಕ ರೋದಿಸಿದ್ದು ಹೀಗೆ...

ಅಫ್ಗಾನಿಸ್ತಾನದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸಾವಿಗೀಡಾದವರ ಸಂಖ್ಯೆ 1,411ಕ್ಕೆ ಏರಿಕೆಯಾಗಿದ್ದು, 3,100ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಇದು ದಶಕಗಳಲ್ಲಿಯೇ ದೇಶದಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪ ಎಂದು ತಾಲಿಬಾನ್ ಸರ್ಕಾರ ಹೇಳಿದೆ.
.ಅಫ್ಗಾನಿಸ್ತಾನ | 6.0 ತೀವ್ರತೆಯ ಪ್ರಬಲ ಭೂಕಂಪ: 1,400ರ ಗಡಿ ದಾಟಿದ ಸಾವಿನ ಸಂಖ್ಯೆ.
‘ಭೂಕಂಪದಿಂದ ತೀವ್ರ ಹಾನಿಗೊಳಗಾಗಿರುವ ಕುನಾರ್ ಪ್ರಾಂತ್ಯದಲ್ಲಿ ಹೆಚ್ಚು ಜನ ಮೃತಪಟ್ಟಿದ್ದಾರೆ. ನಂಗರಹಾರ್ನಲ್ಲಿಯೂ ಸುಮಾರು 12 ಮಂದಿ ಸಾವಿಗೀಡಾಗಿದ್ದಾರೆ’ ಎಂದು ತಾಲಿಬಾನ್ ಸರ್ಕಾರದ ವಕ್ತಾರರಾದ ಜಬೀವುಲ್ಲಾ ಮುಜಾಹಿದ್ ಅವರು ‘ಎಕ್ಸ್’ನಲ್ಲಿ ಮಾಹಿತಿ ನೀಡಿದ್ದಾರೆ.

ನಂಗರಹಾರ್ ಪ್ರಾಂತ್ಯದ ಜಲಾಲಾಬಾದ್ ನಗರದಿಂದ 27 ಕಿ.ಮೀ. ದೂರದಲ್ಲಿ ಕಂಪನದ ಕೇಂದ್ರ ಬಿಂದುವಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (ಯುಎಸ್ಜಿಎಸ್) ದೃಢಪಡಿಸಿದೆ. ಬೆಳಿಗಿನ ಜಾವ 4 ಗಂಟೆಯವರೆಗೆ 6ಕ್ಕೂ ಹೆಚ್ಚು ಲಘು ಕಂಪನಗಳು ವರದಿಯಾಗಿವೆ. ಮಂಗಳವಾರವೂ ಇದೇ ಜಾಗದಲ್ಲಿ ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿತು.

ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಕುನಾರ್ ಒಂದರಲ್ಲೇ 5,400ಕ್ಕೂ ಅಧಿಕ ಮನೆಗಳು ನೆಲಸಮಗೊಂಡಿವೆ ಎಂದು ಕುನಾರ್ ಪ್ರಾಂತೀಯ ಅಧಿಕಾರಿಗಳು ತಿಳಿಸಿದರು.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯಾ ಗುಟೆರೆಸ್ ಅವರು 50 ಲಕ್ಷ ಡಾಲರ್ (ಸುಮಾರು ₹44 ಕೋಟಿ) ನೆರವನ್ನು ಘೋಷಿಸಿದ್ದಾರೆ. ‘ವಿಶ್ವಸಂಸ್ಥೆಯು ತುರ್ತು ನೆರವಿಗೆ ಸಜ್ಜಾಗಿದ್ದು, ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ’ ಎಂದು ಅವರು ಸೋಮವಾರ ಹೇಳಿದ್ದಾರೆ.

‘ನಾನು ನನ್ನ ಸ್ನೇಹಿತನಿಗಾಗಿ ಹುಡುಕುತ್ತಿದ್ದೇನೆ. ಅವನು ಎಲ್ಲೂ ಕಾಣಿಸುತ್ತಿಲ್ಲ. ಇಲ್ಲಿನ ಪರಿಸ್ಥಿತಿ ಹೃದಯವಿದ್ರಾವಕವಾಗಿದೆ’ ಎಂದು ಭೂಕಂಪ ಪೀಡಿತ ಪ್ರದೇಶದಲ್ಲಿರುವ ವಾಡಿರ್ ಗ್ರಾಮಕ್ಕೆ ಬಂದಿರುವ ಒಬೈದುಲ್ಲಾ ಅವರು ದುಃಖಿಸಿದರು.

ಐರೋಪ್ಯ ಒಕ್ಕೂಟವು ಅಫ್ಗಾನಿಸ್ತಾನಕ್ಕೆ 10 ಲಕ್ಷ ಯೂರೊ (₹10 ಕೋಟಿ) ನೆರವು ಘೋಷಿಸಿದೆ. 130 ಟನ್ನಷ್ಟು ಅಗತ್ಯ ಸಾಮಗ್ರಿಗಳನ್ನು ಕಳುಹಿಸಿದೆ.

ಭೂಕಂಪವು ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಬಹುದು. ಎಲ್ಲರೂ ನಿದ್ರಿಸುತ್ತಿದ್ದ ವೇಳೆ ಅವಘಡ ಸಂಭವಿಸಿರುವುದರಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಅಪಾಯ ಇದೆ
ಇಂದ್ರಿಕಾ ರತ್ವಾಟ್ಟೆ ಅಫ್ಗಾನಿಸ್ತಾನದಲ್ಲಿರುವ ವಿಶ್ವಸಂಸ್ಥೆಯ ಮಾನವ ನೆರವಿನ ಸಮನ್ವಯಕಾರರು

ಅಫ್ಗಾನಿಸ್ತಾನವು ಆಗಾಗ್ಗೆ ಭೂಕಂಪಕ್ಕೆ ಒಳಗಾಗುತ್ತಲೇ ಇರುತ್ತದೆ. ಹಿಂದು ಕುಶ್ ಪರ್ವತ ಶ್ರೇಣಿಯಲ್ಲಿ ಹೆಚ್ಚು ಬಾರಿ ಭೂಕಂಪ ಸಂಭವಿಸಿದೆ

2023ರ ಅಕ್ಟೋಬರ್ನಲ್ಲಿ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿತು. ಆಗ 1500 ಜನರು ಸಾವಿಗೀಡಾಗಿ 63000 ಮಂದಿ ಗಾಯಗೊಂಡಿದ್ದರು

2022ರ ಜೂನ್ನಲ್ಲಿ ಪಕ್ಟಿಕಾದ ಪೂರ್ವ ಪ್ರಾಂತ್ಯದಲ್ಲಿ ಸಂಭವಿಸಿದ ರಿಕ್ಟರ್ ಮಾಪಕದಲ್ಲಿ 5.9 ತೀವ್ರತೆಯ ಭೂಕಂಪದಲ್ಲಿ 1000 ಜನರು ಮೃತಪಟ್ಟರು

ಪೀಡಿತರನ್ನು ತಲುಪುವುದೇ ಕಷ್ಟ

ಭೂಕಂಪದ ತೀವ್ರತೆಯಿಂದ ಹಲವಾರು ರಸ್ತೆಗಳು ಹಾನಿಗೊಳಗಾಗಿರುವುದರಿಂದ ಅನೇಕ ಹಳ್ಳಿಗಳನ್ನು ಹಾಗೂ ಪರ್ವತ ಪ್ರದೇಶಗಳಲ್ಲಿರುವ ಪೀಡಿತರನ್ನು ತಲುಪಲು ಇನ್ನೂ ಸಾಧ್ಯವೇ ಆಗುತ್ತಿಲ್ಲ. ಪರ್ವತ ಪ್ರದೇಶಗಳನ್ನು ತಲುಪಲು ರಕ್ಷಣಾ ಪಡೆಗಳು ಹರಸಾಹಸ ಮಾಡುತ್ತಿವೆ. ಅನೇಕ ಹಳ್ಳಿಗಳಲ್ಲಿ ಗಾಯಗೊಂಡಿರುವ ಹಲವಾರು ಜನರಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಹೆಲಿಕಾಪ್ಟರ್ಗಳನ್ನು ಬಳಸಲಾಗುತ್ತಿದೆ. ಜನರು ಕೈಗಳಿಂದಲೇ ಅವಶೇಷಗಳನ್ನು ಎತ್ತಿಹಾಕುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.