ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಣಿಪುರ | ಎಎಫ್‌ಎಸ್‌ಪಿಎ 6 ತಿಂಗಳು ವಿಸ್ತರಣೆ: ಗೃಹ ಇಲಾಖೆ

Published : 30 ಸೆಪ್ಟೆಂಬರ್ 2024, 14:18 IST
Last Updated : 30 ಸೆಪ್ಟೆಂಬರ್ 2024, 14:18 IST
ಫಾಲೋ ಮಾಡಿ
Comments

ಇಂಫಾಲ್: ಮಣಿಪುರದಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು (ಎಎಫ್‌ಎಸ್‌ಪಿಎ) ಮತ್ತೆ ಆರು ತಿಂಗಳು ವಿಸ್ತರಿಸಲು ರಾಜ್ಯ ಗೃಹ ಇಲಾಖೆ ನಿರ್ಧರಿಸಿದೆ. 

‘ಅವಧಿ ವಿಸ್ತರಣೆಯು ಅಕ್ಟೋಬರ್‌ 1ರಿಂದ ಜಾರಿಗೆ ಬರಲಿದೆ. ಇಂಫಾಲ್‌ ಕಣಿವೆಯ 19 ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳನ್ನು ಎಎಫ್‌ಎಸ್‌ಪಿಎಯಿಂದ ಹೊರಗಿಡಲಾಗಿದೆ’ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ.

‘19 ಪೊಲೀಸ್‌ ಠಾಣೆಗಳ ವ್ಯಾಪ್ತಿಯ ಪ್ರದೇಶ ಹೊರತುಪಡಿಸಿ ಇಡೀ ರಾಜ್ಯವನ್ನು ಇನ್ನೂ ಆರು ತಿಂಗಳು ಸಂಘರ್ಷಪೀಡಿತ ಪ್ರದೇಶ ಎಂದು ಘೋಷಿಸಲು ಮಣಿಪುರ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಹೇಳಿದೆ.

ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಸೇನೆಗೆ ಶೋಧ ಕಾರ್ಯಾಚರಣೆ, ಬಂಧನ ಮತ್ತು ಕಂಡಲ್ಲಿ ಗುಂಡು ಹಾರಿಸಲು ವಿಶೇಷಾಧಿಕಾರ ಕಾಯ್ದೆಯಡಿ ಸಂಪೂರ್ಣ ಅಧಿಕಾರವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT