ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ–20 ಶೃಂಗಸಭೆ ಬೆನ್ನಲ್ಲೇ ‘ಕ್ವಾಡ್‌’ ಆತಿಥ್ಯಕ್ಕೆ ಭಾರತ ಸಿದ್ಧತೆ

Published 13 ಸೆಪ್ಟೆಂಬರ್ 2023, 23:30 IST
Last Updated 13 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ಜಿ–20 ಆತಿಥ್ಯ ವಹಿಸಿದ್ದ ಬೆನ್ನಲ್ಲೇ ‘ಕ್ವಾಡ್‌’ (ಭಾರತ, ಆಸ್ಟ್ರೇಲಿಯಾ, ಜಪಾನ್‌ ಮತ್ತು ಅಮೆರಿಕ ದೇಶಗಳ ಕೂಟ)  ಶೃಂಗದ ಆತಿಥ್ಯ ವಹಿಸಲು ಭಾರತ ಸಿದ್ಧತೆ ನಡೆಸುತ್ತಿದೆ. ಇದು ರಷ್ಯಾ ಮತ್ತು ಚೀನಾ ದೇಶಗಳ ಆತಂಕಕ್ಕೆ ಕಾರಣವಾಗಿದೆ.

ಶೃಂಗದ ದಿನಾಂಕ ಇನ್ನೂ ಅಂತಿಮವಾಗಿಲ್ಲ. ಆದರೆ ಮುಂದಿನ ವರ್ಷ ಜನವರಿ 26ರ ವೇಳೆಗೆ ನಡೆಸಬಹುದು ಎಂಬ ಪ್ರಸ್ತಾವವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪರಿಗಣಿಸಿದೆ.  ಸದಸ್ಯ ರಾಷ್ಟ್ರಗಳ ಸಲಹೆ  ಮತ್ತು ಆಂತರಿಕ ಚರ್ಚೆ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶದಲ್ಲಿ ಚೀನಾದ ಆಕ್ರಮಣಶೀಲತೆಯನ್ನು ತಡೆಯುವುದಕ್ಕಾಗಿಯೇ ಈ ನಾಲ್ಕು ದೇಶಗಳು ಜತೆಯಾಗಿ ಕ್ವಾಡ್‌ ಕೂಟವನ್ನು ರಚಿಸಿಕೊಂಡಿವೆ.

ಈ ಹಿಂದೆ ಕ್ವಾಡ್  ರಚನೆಗೆ ರಷ್ಯಾ ಸಹ ವಿರೋಧ ವ್ಯಕ್ತಪಡಿಸಿತ್ತು. ಇದು ಚೀನಾ ವಿರುದ್ಧ ಅಮೆರಿಕದ ವಿಭಜನಕಾರಿ ಮತ್ತು ಪ್ರತ್ಯೇಕತಾ ನೀತಿ ಎಂದು ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT