ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಜಾಬ್‌ ನಂತರ ಹರಿದ ಜೀನ್ಸ್‌, ಟಿ–ಶರ್ಟ್ ನಿಷೇಧಿಸಿದ ಮುಂಬೈ ಕಾಲೇಜು

Published 2 ಜುಲೈ 2024, 13:25 IST
Last Updated 2 ಜುಲೈ 2024, 13:25 IST
ಅಕ್ಷರ ಗಾತ್ರ

ಮುಂಬೈ: ಹಿಜಾಬ್ ನಿಷೇಧದ ನಂತರ ಮುಂಬೈನ ಎನ್. ಜಿ.ಆಚಾರ್ಯ ಮತ್ತು ಡಿ. ಕೆ. ಮರಾಠೆ ಕಾಲೇಜು ಇದೀಗ ಮತ್ತೊಂದು ವಸ್ತ್ರಸಂಹಿತೆಯನ್ನು ಜಾರಿಗೆ ತಂದಿದೆ. ಕಾಲೇಜು ಆವರಣದಲ್ಲಿ ಹರಿದ ಜೀನ್ಸ್‌, ಟಿ–ಶರ್ಟ್‌, ಜೆರ್ಸಿ ಧರಿಸುವುದನ್ನು ನಿಷೇಧಿಸಿ ನೋಟಿಸ್ ಹೊರಡಿಸಿದೆ.

ಜೂನ್ 4ರ ಹೊಸ ಶೈಕ್ಷಣಿಕ ವರ್ಷದಿಂದ ವಸ್ತ್ರ ಸಂಹಿತೆ ಜಾರಿಗೆ ತರಲು ನಿರ್ಧರಿಸಿದ್ದ ಕಾಲೇಜು ಆಡಳಿತ ಮಂಡಳಿ, ಧರ್ಮವನ್ನು ಪ್ರತಿನಿಧಿಸುವ ಹಿಜಾಬ್, ನಖಾಬ್, ಬುರ್ಖಾ ನಿಷೇಧಿಸಿತ್ತು. ಕಾಲೇಜಿನ ಕ್ರಮದ ವಿರುದ್ಧ ಕೆಲ ವಿದ್ಯಾರ್ಥಿಗಳು ಬಾಂಬೆ ಹೈಕೋರ್ಟ್‌ ಮೆಟ್ಟೀಲೇರಿದ್ದರು.

ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ಬಾಂಬೆ ಹೈಕೋರ್ಟ್‌ ಜೂನ್‌ 26ರಂದು ಅರ್ಜಿಗಳನ್ನು ವಜಾಗೊಳಿಸಿತ್ತು. ಇದಾದ ಬೆನ್ನಲ್ಲೇ ಜೂನ್‌ 27ರಂದು ಹರಿದ ಜೀನ್ಸ್‌, ಟಿ–ಶರ್ಟ್‌ ಧರಿಸುವುದನ್ನು ನಿಷೇಧಿಸಿ ಕಾಲೇಜು ಆಡಳಿತ ಮಂಡಳಿ ನೋಟಿಸ್ ಹೊರಡಿಸಿತ್ತು.

‘ಕಾಲೇಜಿನ ಆವರಣದಲ್ಲಿ ಹರಿದ ಜೀನ್ಸ್‌, ಟಿ–ಶರ್ಟ್‌, ಅಸಭ್ಯ ಉಡುಪುಗಳು ಮತ್ತು ಜರ್ಸಿ ಧರಿಸಲು ಅವಕಾಶವಿಲ್ಲ. ಶೇಕಡ 75ರಷ್ಟು ಹಾಜರಾತಿ ಕಡ್ಡಾಯ. ಶಿಸ್ತು ಯಶಸ್ವಿನ ಕೀಲಿ ಕೈ’ ಎಂದು ನೋಟಿಸ್‌ನಲ್ಲಿ ಹೇಳಿದೆ.

‘ವಿದ್ಯಾರ್ಥಿಗಳು ಅರ್ಧ ಅಥವಾ ಪೂರ್ಣ ಕೈ ಶರ್ಟ್‌ ಮತ್ತು ಪ್ಯಾಂಟ್ ಧರಿಸಬಹುದು. ವಿದ್ಯಾರ್ಥಿನಿಯರು ಭಾರತೀಯ ಅಥವಾ ಪಾಶ್ಚಿಮಾತ್ಯ ಉಡುಗೆಗಳನ್ನು ಧರಿಸಬಹುದು’ ಎಂದೂ ನೋಟಿಸ್‌ನಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT