ಒಡಿಶಾದ ಖುರ್ದಾ ಜಿಲ್ಲೆಯ ಐಎನ್‌ಎಸ್ ಚಿಲಿಕಾದಲ್ಲಿ ಶುಕ್ರವಾರ ತರಬೇತಿ ಪಡೆದ ಅಗ್ನಿವೀರರ ನಿರ್ಗಮನ ಪಥಸಂಚಲನದಲ್ಲಿ ತ್ರಿಪಾಠಿ ಅವರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ‘16 ವಾರಗಳ ತರಬೇತಿ ಪೂರೈಸಿದ 214 ಮಹಿಳಾ ಅಗ್ನಿವೀರರು ಸೇರಿ ಒಟ್ಟು 1,389 ಅಗ್ನಿವೀರರು ಶುಕ್ರವಾರ ನೌಕಾಪಡೆಗೆ ಸೇರ್ಪಡೆಯಾಗಿದ್ದಾರೆ. ಈ ಯೋಜನೆಯು ಯುವಜನರಿಗೆ ದೇಶಸೇವೆ ಮಾಡಲು ನಾಲ್ಕು ವರ್ಷಗಳ ಅವಕಾಶವನ್ನು ನೀಡುತ್ತದೆ‘ ಎಂದರು.