ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಗಾಂಧಿ ವಾಟ್ಸ್ಆ್ಯಪ್‌ ಚಾನೆಲ್‌: ಮೊದಲ ದಿನವೇ 42 ಲಕ್ಷ ಜನರು ಸೇರ್ಪಡೆ

Published 23 ನವೆಂಬರ್ 2023, 12:58 IST
Last Updated 23 ನವೆಂಬರ್ 2023, 12:58 IST
ಅಕ್ಷರ ಗಾತ್ರ

ಬೆಂಗಳೂರು: ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್‌ ಕೆಲವು ದಿನಗಳ ಹಿಂದೆ ಪರಿಚಯಿಸಿರುವ ಹೊಸ ವೈಶಿಷ್ಟ್ಯ ವಾಟ್ಸ್ಆ್ಯಪ್‌ ಚಾನೆಲ್ (WhatsApp Channel) ಭಾರತದಲ್ಲೂ ಭಾರೀ ಜನಪ್ರಿಯವಾಗುತ್ತಿದೆ.

ರಾಜಕಾರಣಿಗಳು, ಸಿನಿಮಾ ನಟ ನಟಿಯರು, ಕ್ರೀಡಾಪಟುಗಳು ಸೇರಿದಂತೆ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ವಾಟ್ಸ್ಆ್ಯಪ್‌ ಚಾನೆಲ್ ಮೊರೆ ಹೋಗುತ್ತಿದ್ದಾರೆ.

ಇದೀಗ ದೆಹಲಿ ಕಾಂಗ್ರೆಸ್‌ ಸಮಿತಿ ರಾಹುಲ್‌ ಗಾಂಧಿ ಅವರ ವಾಟ್ಸ್ಆ್ಯಪ್‌ ಚಾನೆಲ್ ಆರಂಭಿಸಿದೆ.

ದೆಹಲಿ ಕಾಂಗ್ರೆಸ್‌ ನಾಯಕ ಅರವಿಂದರ್ ಸಿಂಗ್ ಲವ್ಲಿ ಅವರು ನಿನ್ನೆ (ಬುಧವಾರ) ರಾಹುಲ್‌ ಗಾಂಧಿ ಅವರ ವಾಟ್ಸ್ಆ್ಯಪ್‌ ಚಾನೆಲ್ ಪ್ರಾರಂಭಿಸಿದರು. ಈ ಚಾನೆಲ್‌ಗೆ ಒಂದೇ ದಿನದಲ್ಲಿ 42 ಲಕ್ಷ ಜನರು ಸೇರಿದ್ದಾರೆ ಎಂದು ಅರವಿಂದರ್ ಸಿಂಗ್ ಲವ್ಲಿ ಹೇಳಿದ್ದಾರೆ. 

ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಇರುವವರು ನೇರವಾಗಿಯೇ ರಾಹುಲ್ ಗಾಂಧಿ ಅವರ ಪೋಸ್ಟ್‌ಗಳನ್ನು ವಾಟ್ಸ್ಆ್ಯಪ್‌ ಚಾನೆಲ್‌ ಮೂಲಕ ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT