ನವದೆಹಲಿ: ‘ಮುಕ್ತ ದತ್ತಾಂಶವು ನಿಜವಾದ ಪರಿವರ್ತನೆ ತರಬಹುದು’ ಎಂದು ಪ್ರತಿಪಾದಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್, ‘ಇದಕ್ಕೆ ವಿಶ್ವಾಸಾರ್ಹ ನಿಯಂತ್ರಕ ಚೌಕಟ್ಟು ರೂಪಿಸಬೇಕು’ ಎಂದು ಹೇಳಿದರು.

ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ‘ಮುಕ್ತ ದತ್ತಾಂಶಕ್ಕಾಗಿ ನಿಯಂತ್ರಕ ಚೌಕಟ್ಟಿನ ಅನ್ವೇಷಣೆ’ ಎಂಬ ಶೀರ್ಷಿಕೆಯಡಿಯ ಅಧಿವೇಶನದಲ್ಲಿ ಮಾತನಾಡಿದ ಅವರು, ‘ಖಾಸಗಿತನಕ್ಕೆ ಚ್ಯುತಿ ಬರುವುದಿಲ್ಲ ಎನ್ನುವುದನ್ನು ಖಾತ್ರಿಪಡಿಸಬೇಕು’ ಎಂದರು.

‘ಮುಕ್ತತೆ ಮತ್ತು ನಿಯಂತ್ರಣದ ಪೈಕಿ ಒಂದನ್ನಷ್ಟೇ ಆಯ್ಕೆ ಮಾಡಬೇಕು ಎಂದಲ್ಲ. ಆದರೆ, ಎರಡನ್ನೂ ಗೌರವಿಸುವ ವ್ಯವಸ್ಥೆಯನ್ನು ವಿನ್ಯಾಸಗೊಳಿಸಬೇಕು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.