ಚೆನ್ನೈ: ಜೂನ್ 23ರ ಅಖಿಲ ಭಾರತ ಅಣ್ಣಾ ದ್ರಾವಿಡ ಮುನೇತ್ರ ಕಳಗಂ (ಎಐಎಡಿಎಂಕೆ) ನಾಯಕತ್ವ ಪ್ರಕರಣಕ್ಕೆ ಸಂಬಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮದ್ರಾಸ್ ಹೈಕೋರ್ಟ್ ಬುಧವಾರ ಆದೇಶಿಸಿದೆ.
ಇದರಿಂದ ಎಐಎಡಿಎಂಕೆ ನಾಯಕ ಇ. ಪಳನಿಸ್ವಾಮಿ (ಇಪಿಎಸ್) ಅವರಿಗೆ ಹಿನ್ನಡೆಯಾಗಿದೆ.
ಜುಲೈ 11ರಂದು ನಡೆದ ಎಐಎಡಿಎಂಕೆ ಸಾಮಾನ್ಯ ಸಭೆಯನ್ನು ಅಮಾನ್ಯಗೊಳಿಸಿ ನ್ಯಾಯಮೂರ್ತಿ ಜಿ. ಜಯಚಂದ್ರನ್ ಬುಧವಾರ ಆದೇಶ ಹೊರಡಿಸಿದ್ದಾರೆ.
ಜುಲೈ 11ರಂದು ನಡೆದ ಪಕ್ಷದ ಸಾಮಾನ್ಯ ಸಭೆಯಲ್ಲಿ ಇಪಿಎಸ್ ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳಿಸಲಾಗಿತ್ತು. ಅಲ್ಲದೆ ಪಕ್ಷ ವಿರೋಧಿ ಚುಟುವಟಿಕೆ ಆಪಾದನೆ ಮೇರೆಗೆ ಒ. ಪನ್ನೀರಸೆಲ್ವಂ (ಒಪಿಎಸ್) ಅವರನ್ನು ಉಚ್ಚಾಟಿಸಲಾಗಿತ್ತು.
ಇದರ ವಿರುದ್ಧ ಒಪಿಎಸ್ ನ್ಯಾಯಾಲದ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮೂರು ವಾರಗಳ ಒಳಗೆ ತೀರ್ಪು ನೀಡುವಂತೆ ಮದ್ರಾಸ್ ಹೈಕೋರ್ಟ್‌ಗೆ ಸೂಚಿಸಿತ್ತು.
Madras High Court cancels #AIADMK General Council meeting held on July 11; orders convening of a fresh General Council meeting.
The July 11 meeting had elected Edappadi K Palaniswami as the interim general secretary@DeccanHerald
— Sivapriyan E.T.B | சிவப்பிரியன் ஏ.தி.ப (@sivaetb) August 17, 2022