ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದಲ್ಲಿ ‘ಕರ್ನಾಟಕ ಕಾಂಗ್ರೆಸ್ ತಂತ್ರ’ ಅನುಸರಿಸಲು ಮುಂದಾದ ಅಖಿಲೇಶ್‌

ಉತ್ತರ ಪ್ರದೇಶದಲ್ಲಿ ‘ಮೃದು ಹಿಂದುತ್ವ’ದ ಮೊರೆ ಹೋದ ಸಮಾಜವಾದಿ ಪಕ್ಷ
Published 30 ಮೇ 2023, 16:28 IST
Last Updated 30 ಮೇ 2023, 16:28 IST
ಅಕ್ಷರ ಗಾತ್ರ

ಲಖನೌ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಂದು ವಾರ ಬಾಕಿ ಇದ್ದಾಗ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಪಿಎಫ್‌ಐ ಮತ್ತು ಬಜರಂಗ ದಳದಂಥ ಸಂಘಟನೆಗಳನ್ನು ನಿಷೇಧಿಸುವುದಾಗಿ ಘೋಷಿಸಿದ್ದು ಬಾರಿ ವಿವಾದಕ್ಕೆ ಕಾರಣವಾಗಿತ್ತು. ಇದರಿಂದ ಉಂಟಾಗಬಹುದಾದ ಮತ ದ್ರುವೀಕರಣ ತಡೆಗೆ ಕಾಂಗ್ರೆಸ್‌ ‘ಮೃದು ಹಿಂದುತ್ವ’ದ ಮೊರೆ ಹೋಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ರಾಜ್ಯದಲ್ಲಿ ಹನುಮಾನ್‌ ದೇಗುಲ ಸ್ಥಾಪಿಸುವ ಭರವಸೆ ನೀಡಿದ್ದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಅನುಸರಿಸಿದ್ದ ಈ ತಂತ್ರವನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್‌ ಅವರು ಉತ್ತರ ಪ್ರದೇಶದಲ್ಲಿಯೂ ಅನುಸರಿಸಲು ಮುಂದಾಗಿದ್ದಾರೆ. ಈ ಮೂಲಕ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದ್ದಾರೆ.

‘ಸೀತಾಪುರ ಜಿಲ್ಲೆಯಲ್ಲಿರುವ ಧಾರ್ಮಿಕ ನಗರ ನೈಮಿಶರಣ್ಯದಲ್ಲಿ ಕಾರ್ಯಕರ್ತರಿಗಾಗಿ ಮುಂದಿನ ತಿಂಗಳು ಎರಡು ದಿನಗಳ ತರಬೇತಿ ಶಿಬಿರವನ್ನು ಆಯೋಜಿಸಲು ಸಮಾಜವಾದಿ ಪಕ್ಷ ನಿರ್ಧರಿಸಿದೆ. ವೇದ ಮಂತ್ರಗಳ ಪಠಣ, ಭಜನೆಯೊಂದಿಗೆ ಶಿಬಿರ ಆರಂಭವಾಗಲಿದೆ. ಹೋಮ–ಹವನಗಳು ನಡೆಯಲಿವೆ. ಅಖಿಲೇಶ್ ಮತ್ತಿತರ ಹಿರಿಯ ನಾಯಕರು ಪೂಜಾ ಕೈಂಕರ್ಯ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ 5,000ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

‌ಕಾರ್ಯಕ್ರಮ ನಡೆಯುವ ಸ್ಥಳವು ಧಾರ್ಮಿಕವಾಗಿ ಮಹತ್ವ ಪಡೆದಿದೆ. ಇಲ್ಲಿನ ಅರಣ್ಯದಲ್ಲಿ 88,000 ಋಷಿಗಳು ತಪಸ್ಸು ಮಾಡಿದ್ದರು. ವೇದವ್ಯಾಸರು ಅವರಿಗೆ ವೇದಗಳು, ಪುರಾಣಗಳು ಮತ್ತು ಶಾಸ್ತ್ರಗಳನ್ನು ಧಾರೆ ಎರೆದಿದ್ದರು ಎಂಬ ಪ್ರತೀತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT