ನವದೆಹಲಿ: ಹೆಚ್ಚುವರಿ ನ್ಯಾಯಮೂರ್ತಿಗಳು ಸೇರಿದಂತೆ ಹೈಕೋರ್ಟ್ನ ಎಲ್ಲಾ ನ್ಯಾಯಮೂರ್ತಿಗಳು ಪೂರ್ಣ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ.

ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ವಾರ್ಷಿಕ ₹15 ಲಕ್ಷ ಪಿಂಚಣಿ ಪಡೆಯಲಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸೀಹ್ ಅವರನ್ನು ಒಳಗೊಂಡ ನ್ಯಾಯಪೀಠವು, ‘ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ಯಾವಾಗ ನೇಮಕವಾದರು, ಹೆಚ್ಚುವರಿ ನ್ಯಾಯಮೂರ್ತಿ ಆಗಿದ್ದಾಗಲೇ ನಿವೃತ್ತಿ ಹೊಂದಿದರೇ ಅಥವಾ ಅವರನ್ನು ಕಾಯಂಗೊಳಿಸಲಾಗಿತ್ತೇ ಎಂಬ ಅಂಶಗಳನ್ನು ಪರಿಗಣಿಸದೆ ಪೂರ್ಣ ಪಿಂಚಣಿ ನೀಡಬೇಕು’ ಎಂದು ತಿಳಿಸಿತು.

ನ್ಯಾಯಮೂರ್ತಿಗಳ ನೇಮಕದ ಅವಧಿ ಮತ್ತು ಅವರ ಹುದ್ದೆ ಆಧಾರದಲ್ಲಿ ತಾರತಮ್ಯ ಮಾಡುವುದು ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತೆ ಎಂದು ಪ್ರತಿಪಾದಿಸಿತು.

ಸಿಜೆಐ ಗವಾಯಿ ಅವರು, ‘ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿ ಮೃತಪಟ್ಟರೆ ಅವರ ಕುಟುಂಬಸ್ಥರು, ಕಾಯಂ ನ್ಯಾಯಮೂರ್ತಿಗಳು ಪಡೆಯುವಷ್ಟೇ ಪಿಂಚಣಿ ಮತ್ತು ನಿವೃತ್ತಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ’ ಎಂದು ತಿಳಿಸಿದರು.

ಕೋರ್ಟ್ ಹೇಳಿದ್ದೇನು?

ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳ ಪಿಂಚಣಿಗೆ ಸಂಬಂಧಿಸಿದ ಸಂವಿಧಾನದ 200ನೇ ವಿಧಿಯನ್ನು ಪರಿಶೀಲಿಸಿ ಈ ತೀರ್ಪು ಪ್ರಕಟ

ನೂತನ ಪಿಂಚಣಿ ವ್ಯವಸ್ಥೆಯಡಿ ಬರುವವರಿಗೂ ಇಷ್ಟೇ ಪಿಂಚಣಿ ಲಭ್ಯ

ಹೆಚ್ಚುವರಿ ನ್ಯಾಯಮೂರ್ತಿ ಸೇರಿ ಹೈಕೋರ್ಟ್ನ ಎಲ್ಲ ನ್ಯಾಯಮೂರ್ತಿಗಳಿಗೆ ಕೇಂದ್ರ ಸರ್ಕಾರವು ವಾರ್ಷಿಕ ₹13.50 ಲಕ್ಷ ಪಿಂಚಣಿ ಪಾವತಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.