ಎಎಪಿಯೊಂದಿಗೆ ಮೈತ್ರಿ 'ಪ್ರಮಾದ'
ದೆಹಲಿಯಲ್ಲಿ ಎಎಪಿಯೊಂದಿಗೆ ಮೈತ್ರಿ ಮಾಡಿಕೊಂಡದ್ದು 'ಪ್ರಮಾದ' ಎಂದು ಮಾಕೆನ್ ಹೇಳಿದ್ದಾರೆ. ಆದರೆ, ಅದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದ್ದಾರೆ. '2013ರಲ್ಲಿ 40 ದಿನ ಎಎಪಿಯನ್ನು ಬೆಂಬಲಿಸಿದ್ದೇ, ರಾಷ್ಟ್ರ ರಾಜಧಾನಿಯ ಈಗಿನ ಸ್ಥಿತಿ ಹಾಗೂ ಇಲ್ಲಿ ಕಾಂಗ್ರೆಸ್ ದುರ್ಬಲಗೊಳ್ಳಲು ಕಾರಣ ಎಂದು ನನಗನಿಸುತ್ತಿದೆ. ದೆಹಲಿಯಲ್ಲಿ ಮೈತ್ರಿಮಾಡಿಕೊಳ್ಳುವ ಮೂಲಕ ಅದೇ ಪ್ರಮಾದವನ್ನು ಪುನರಾವರ್ತಿಸಲಾಯಿತು. ಅದನ್ನು ಸರಿಪಡಿಸಿಕೊಳ್ಳಬೇಕಿದೆ' ಎಂದು ಪ್ರತಿಪಾದಿಸಿದ್ದಾರೆ.