ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಬಹುತೇಕ ರಾಜ್ಯಗಳು ಎನ್‌ಇಪಿ ಜಾರಿಗೊಳಿಸುತ್ತಿವೆ: ಧರ್ಮೇಂದ್ರ ಪ್ರಧಾನ್

Published 19 ಜನವರಿ 2024, 10:58 IST
Last Updated 19 ಜನವರಿ 2024, 10:58 IST
ಅಕ್ಷರ ಗಾತ್ರ

ಹೈದರಾಬಾದ್‌ : ದೇಶದ ಬಹುತೇಕ ಎಲ್ಲ ರಾಜ್ಯಗಳು ರಾಷ್ಟ್ರೀಯ ಶಿಕ್ಷಣ ನೀತಿ–2020 ಅನ್ನು ಜಾರಿಗೆ ತರುತ್ತಿವೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಶುಕ್ರವಾರ ತಿಳಿಸಿದರು.

ಐಐಟಿ– ಹೈದರಾಬಾದ್‌ನಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಯೋಜನೆಗೊಂಡಿರುವ ಉತ್ಸವವನ್ನು ಉದ್ಘಾಟಿಸಿ‌ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಹಿಂಜರಿಕೆ ತೋರುತ್ತಿರುವ ಕೆಲ ರಾಜ್ಯಗಳು ಸಹ ವಿಭಿನ್ನ ಪರಿಭಾಷೆಯ ಮೂಲಕ ಈ ನೀತಿಯನ್ನು ಜಾರಿಗೆ ತರುತ್ತಿವೆ ಎಂದರು.

‘ವಿಭಿನ್ನ ಪರಿಭಾಷೆಯನ್ನು ಬಳಸುವುದರಲ್ಲಿ ಆ ರಾಜ್ಯಗಳು ತೃಪ್ತಿ ಕಾಣುತ್ತಿವೆ. ನಾನೂ ಸಂತುಷ್ಟನಾಗಿದ್ದೇನೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ–2020 ದೇಶದ ತಾತ್ವಿಕ ಮತ್ತು ಐತಿಹಾಸಿಕ ದಾಖಲೆಯಾಗಿದ್ದು, ಬಹುತೇಕ ರಾಜ್ಯಗಳು ಇದನ್ನು ಜಾರಿಗೊಳಿಸುತ್ತಿವೆ ಎಂಬುದನ್ನು ನಾನು ಹೇಳಬಲ್ಲೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT