ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರನಾಥ ಯಾತ್ರೆಗೆ ಪ್ರಯಾಣ ಆರಂಭಿಸಿದ ಮೊದಲ ತಂಡ- ಶುಭಕೋರಿದ ಗೃಹ ಸಚಿವ ಅಮಿತ್ ಶಾ

ಕಾಶ್ಮೀರದ ಗಂಡೇರಬಾಲ್ ಜಿಲ್ಲೆಯ ಬಾಲ್ಟಾಲ್ ಬೇಸ್ ಕ್ಯಾಂಪ್‌ನಿಂದ ಮೊದಲ ತಂಡ ಶನಿವಾರ ಬೆಳಿಗ್ಗೆ ಪ್ರಯಾಣ ಆರಂಭಿಸಿತು.
Published 1 ಜುಲೈ 2023, 5:55 IST
Last Updated 1 ಜುಲೈ 2023, 5:55 IST
ಅಕ್ಷರ ಗಾತ್ರ

ಶ್ರೀನಗರ: ಅಮರನಾಥ ಯಾತ್ರೆಗೆ ಕಾಶ್ಮೀರದ ಗಂಡೇರಬಾಲ್ ಜಿಲ್ಲೆಯ ಬಾಲ್ಟಾಲ್ ಬೇಸ್ ಕ್ಯಾಂಪ್‌ನಿಂದ ಮೊದಲ ತಂಡ ಶನಿವಾರ ಬೆಳಿಗ್ಗೆ ಪ್ರಯಾಣ ಆರಂಭಿಸಿತು.

ಲೆಫ್ಟಿನೆಂಟ್‌ ಗವರ್ನರ್‌ ಮನೋಜ್ ಸಿನ್ಹಾ ಶುಕ್ರವಾರ, ಭಗವತಿ ನಗರದಲ್ಲಿರುವ ಶಿಬಿರದಲ್ಲಿ ಚಾಲನೆ ನೀಡಿದ್ದರು.

ದಕ್ಷಿಣ ಕಾಶ್ಮೀರದಲ್ಲಿನ ಹಿಮಾಲಯ ಪರ್ವತದ 3,880 ಮೀಟರ್ ಎತ್ತರದಲ್ಲಿನ ಗುಹೆಯೊಳಗಿರುವ ಶಿವನ ದರ್ಶನ ಪಡೆಯಲು 3,400 ಯಾತ್ರಿಗಳ ಮೊದಲ ತಂಡ, ಭಾರಿ ಭದ್ರತೆಯೊಂದಿಗೆ ಬಾಲ್ಟಾಲ್ ಬೇಸ್ ಕ್ಯಾಂಪ್‌ನಿಂದ ಪ್ರಯಾಣ ಆರಂಭಿಸಿತು.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಗೃಹ ಇಲಾಖೆ ಭಕ್ತಾಧಿಗಳಿಗೆ ಅಗತ್ಯ ಎಲ್ಲ ಸೌಕರ್ಯಗಳನ್ನು ಗೃಹ ಇಲಾಖೆ ಮಾಡಿದೆ. ಶುಭಾಶಯಗಳು ಎಂದು ಹೇಳಿದ್ದಾರೆ.

62 ದಿನದ ಈ ಯಾತ್ರೆಯಲ್ಲಿ ಒಂದು ಕ್ಯಾಂಪ್‌ನಿಂದ ಯಾತ್ರಾರ್ಥಿಗಳು 13 ಕಿಲೋ ಮೀಟರ್ ದುರ್ಗಮ ಪರ್ವತ ಹಾದಿಯನ್ನು ಕ್ರಮಿಸಬೇಕಿದೆ. ಇನ್ನೊಂದು ಅನಂತನಾಗ್ ಜಿಲ್ಲೆಯ ನೂನ್ವಾನ್‌–ಪಹಲ್‌ಗಾಮ್‌ನ ಸಾಂಪ್ರದಾಯಿಕ 48 ಕಿ.ಮೀ. ದೂರದ ಮಾರ್ಗ ಕ್ರಮಿಸಬೇಕಿದೆ.

ಸಿಆರ್‌ಪಿಎಫ್‌ ಪೊಲೀಸರು ಯಾತ್ರಿಗಳ ತಂಡಕ್ಕೆ ಬೆಂಗಾವಲಾಗಿ ಭದ್ರತೆ ಒದಗಿಸಿದ್ದಾರೆ. ಸೇನೆ, ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಯಾತ್ರೆ ಸಾಗುವ ಹಾದಿಯುದ್ದಕ್ಕೂ ರಕ್ಷಣೆಗೆ ಸಜ್ಜಾಗಿದ್ದಾರೆ.

‘ಈಗಾಗಲೇ 3.5 ಲಕ್ಷ ಯಾತ್ರಿಗಳು ಹೆಸರು ನೋಂದಾಯಿಸಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಜಮ್ಮುವಿನಲ್ಲಿ 33 ವಸತಿ ಕೇಂದ್ರ ಸ್ಥಾಪಿಸಲಾಗಿದೆ. ನೋಂದಣಿ ಕೇಂದ್ರಗಳಲ್ಲಿ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್‌ (ಆರ್‌ಎಫ್‌ಐಡಿ) ಟ್ಯಾಗ್‌ ನೀಡಲಾಗುವುದು. ಇದನ್ನು ಪಡೆಯುವುದು ಕಡ್ಡಾಯ. ತತ್ಕಾಲ್‌ ನೋಂದಣಿಗಾಗಿ ವೈಷ್ಣವಿಧಾಮ, ಮಹಾಜನ ಸಭಾ, ಪಂಚಾಯತ್ ಘರ್‌ನಲ್ಲಿ ಯಾತ್ರಿಗಳಿಗಾಗಿಯೂ; ಸಂತರಿಗಾಗಿ ಗೀತಾ ಭವನ ಮತ್ತು ರಾಮಮಂದಿರದಲ್ಲಿ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ’ ಎಂದು ಜಮ್ಮು ಜಿಲ್ಲಾಧಿಕಾರಿ ಅವ್ನಿ ಲಾವಾಸಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT