ಶ್ರೀನಗರ: ಬುಧವಾರ ಕಳೆದ 24 ಗಂಟೆಗಳ ಅವಧಿಯಲ್ಲಿ ಐವರು ಅಮರನಾಥ ಯಾತ್ರಿಗಳು ಸಾವಿಗೀಡಾಗಿದ್ದು, ಯಾತ್ರೆಯಲ್ಲಿ ಸಾವಿಗೀಡಾದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಹಲ್‌ಗಾಮ್‌ನಲ್ಲಿ ಮೂವರು ಸಾವಿಗೀಡಾಗಿದರೆ, ಇನ್ನಿಬ್ಬರು ಬಲ್‌ತಾಲ್ ಮಾರ್ಗದಲ್ಲಿ ಸಾವಿಗೀಡಾಗಿದ್ದಾರೆ. ಐದು ಮಂದಿಯೂ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತರಲ್ಲಿ ಒಬ್ಬರು ಉತ್ತರಪ್ರದೇಶದವರಾದರೆ, ಮತ್ತೊಬ್ಬರು ಮಧ್ಯಪ್ರದೇಶದವರು. ಇನ್ನುಳಿದ ಯಾತ್ರಿಗಳ ಗುರುತು ಇನ್ನೂ ತಿಳಿದುಬಂದಿಲ್ಲ.
ಮಂಗಳವಾರದ ತನಕ 1,37,353 ಯಾತ್ರಿಗಳು ಅಮರನಾಥಕ್ಕೆ ಭೇಟಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.