ನವದೆಹಲಿ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ₹228 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ಮಗ ಜೈ ಆನ್ಮೋಲ್ ಅನಿಲ್ ಅಂಬಾನಿ ಅವರ ಮನೆಯಲ್ಲಿ ಸಿಬಿಐ ಶೋಧ ನಡೆಸಿದೆ.

ಬ್ಯಾಂಕ್ ನೀಡಿದ ದೂರಿನ ಆಧಾರದ ಮೇಲೆ ಅಂಬಾನಿ ಮತ್ತು ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟಿಡ್(ಆರ್ಎಚ್ಎಫ್ಎಲ್) ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿತ್ತು.

ಬ್ಯಾಂಕ್ನಿಂದ ₹228 ಕೋಟಿ ಸಾಲ ಪಡೆದಿದ್ದ ಆರ್ಎಚ್ಎಫ್ಎಲ್ ಸಂಸ್ಥೆಯು ಮರುಪಾವತಿಸಿರಲಿಲ್ಲ. 2019ರಲ್ಲಿ ಈ ಸಾಲವನ್ನು ಅನುತ್ಪಾದಕ ಸಾಲವೆಂದು ಘೊಷಿಸಲಾಗಿತ್ತು. ಈ ಸಂಬಂಧ ಆರ್ಎಚ್ಎಫ್ಎಲ್, ಅಂದಿನ ನಿರ್ದೇಶಕ ಆನ್ಮೋಲ್ ಅನಿಲ್ ಅಂಬಾನಿ ಮತ್ತು ಮಾಜಿ ಸಿಇಒ ರವೀಂದ್ರ ಶರತ್ ಸುಧಾಕರ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಸಂಬಂಧ ಅನಿಲ್ ಅಂಬಾನಿ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮುಂಬೈ ಸಿಬಿಐ ವಿಶೇಷ ನ್ಯಾಯಾಧೀಶರ ಬಳಿಯಿಂದ ಸರ್ಚ್ ವಾರಂಟ್ ಪಡೆದಿದ್ದ ಸಿಬಿಐ, ಆರ್ಎಚ್ಎಫ್ಎಲ್ಗೆ ಸಂಬಂಧಿಸಿದ ಎರಡು ಸ್ಥಳಗಳು, ಆನ್ಮೋಲ್ ಅವರ ಅಧಿಕೃತ ನಿವಾಸ ಮತ್ತು ರವೀಂದ್ರ ಅವರ ಮನೆಯಲ್ಲಿ ಶೋಧ ನಡೆಸಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಮುಂಬೈನ ಕಫ್ಫೆ ಪರೇಡ್ನಲ್ಲಿರುವ ಅನಿಲ್ ಅಂಬಾನಿ ಅವರ ನಿವಾಸವಾದ ಸೀ ವಿಂಡ್ ಕಟ್ಟಡದ ಏಳನೇ ಮಹಡಿಗೆ ಇಂದು ಬೆಳಿಗ್ಗೆ ಸಿಬಿಐ ತಂಡಗಳು ತೆರಳಿದ್ದವು. ಅಲ್ಲಿ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ 18 ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಕಾರ್ಪೊರೇಟ್ ಸಂಸ್ಥೆಗಳಿಂದ ₹5572.35 ಕೋಟಿ ಸಾಲವನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.