ಬಾಲಿವುಡ್ನಲ್ಲಿ ಸದ್ಯ ಚೆಕ್ ಬೌನ್ಸ್ ಪ್ರಕರಣಗಳು ಸದ್ದು ಮಾಡುತ್ತಿವೆ. ಇದೇ ಪ್ರಕರಣದಲ್ಲಿ ಜೈಲು ಸೇರಿದ್ದ ಹಾಸ್ಯ ನಟ ರಾಜ್ಪಾಲ್ ಯಾದವ್ಗೆ ನ್ಯಾಯಾಲಯ ಮಧ್ಯಂತರ ಬಿಡುಗಡೆ ಭಾಗ್ಯ ನೀಡಿದೆ. ಅದರ ಬೆನ್ನಲ್ಲೇ ನಟಿ ಅಮೀಶಾ ಪಟೇಲ್ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ಕೇಳಿಬಂದಿದ್ದು, ಮೊರಾದಾಬಾದ್ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ರಾಜ್ಪಾಲ್ ಬಳಿಕ ಅಮೀಷಾ ಜೈಲು ಸೇರಲಿದ್ದಾರೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿವೆ. ನ್ಯಾಯಾಲಯ ವಾರಂಟ್ ಹೊರಡಿಸಿದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಅಮೀಶಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ‘ಇದು ಹಳೆಯ ಪ್ರಕರಣ, ಈಗಾಗಲೇ ಇತ್ಯರ್ಥಗೊಂಡಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
.ಹಾಸ್ಯ ಕಲಾವಿದ ರಾಜ್ಪಾಲ್ ಯಾದವ್ ಸಹಾಯಕ್ಕೆ ಧಾವಿಸಿದ ಸೋನು ಸೂದ್: ಹೇಳಿದ್ದೇನು?.
ಪ್ರಕರಣವೇನು?

ಅಮೀಶಾ ವಿರುದ್ಧ ಮೊರಾದಾಬಾದ್ನ ಇವೆಂಟ್ ಮ್ಯಾನೇಜರ್ ಪವನ್ ವರ್ಮಾ ಎನ್ನುವವರು ಚೆಕ್ಬೌನ್ಸ್ ಪ್ರಕರಣ ದಾಖಲಿಸಿದ್ದಾರೆ.

ಪವನ್ ವರ್ಮಾ ನೀಡಿರುವ ದೂರಿನ ಪ್ರಕಾರ, 2017ರ ನವೆಂಬರ್ 16ರಂದು ಮದುವೆ ಆಯೋಜಿಸುವ ಸಲುವಾಗಿ ಪವನ್ ಜತೆ ₹14.50 ಲಕ್ಷಕ್ಕೆ ಅಮೀಶಾ ಮಾತುಕತೆ ನಡೆಸಿದ್ದರು. ಆದರೆ ಅಮೀಶಾ ಅವರು ನವೆಂಬರ್ 16ರಂದು ಮೊರಾದಾಬಾದ್ಗೆ ಭೇಟಿ ನೀಡಲಿಲ್ಲ, ಬದಲಾಗಿ ಹಣ ಪಾವತಿಸುವುದಾಗಿ ಹೇಳಿದ್ದರು. ಅದರಂತೆ ₹10 ಲಕ್ಷ ನಗದು ನೀಡಿದ್ದರು, 4.50 ಲಕ್ಷದ ಚೆಕ್ ನೀಡಿದ್ದರು. ಆದರೆ ಚೆಕ್ ಬೌನ್ಸ್ ಆಗಿದೆ. ಹೀಗಾಗಿ ಪವನ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮೊರಾದಾಬಾದ್ ಕೋರ್ಟ್ನಿಂದ ಹಲವು ಬಾರಿ ಅಮೀಶಾ ಅವರಿಗೆ ಸಮನ್ಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಕಾರಣ ಈಗ ಜಾಮೀನು ರಹಿತ ವಾರಂಟ್ ನೀಡಲಾಗಿದೆ.

ಹಳೆಯ ಪ್ರಕರಣವೆಂದ ಅಮೀಶಾ ಪರ ವಕೀಲ

ಈ ಬಗ್ಗೆ ಅಮೀಶಾ ಪರ ವಕೀಲ ಅಭಿಷೇಕ್ ಶರ್ಮಾ ಹೇಳಿಕೆ ಬಿಡುಗಡೆ ಮಾಡಿದ್ದು, ‘ಇದು 2017ರಲ್ಲಿ ನಡೆದ ಘಟನೆಯಾಗಿದೆ. ಈಗಾಗಲೇ ಪೂರ್ಣ ಹಣ ಪಾವತಿಯೂ ಆಗಿದೆ. ಆದರೆ ಈಗ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಅಮೀಶಾ ಅವರು ನ್ಯಾಯಾಲಯಕ್ಕೆ ಹಾಜರಾಗಿ ಸ್ಪಷ್ಟನೆ ನೀಡಲಿದ್ದಾರೆ’ ಎಂದು ತಿಳಿಸಿದ್ದಾರೆ.

ನಟಿ ಸ್ಪಷ್ಟನೆ

ಇದೇ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅಮೀಶಾ ಪಟೇಲ್, ‘ಮೊರಾದಾಬಾದ್ನಲ್ಲಿ ಪವನ್ ವರ್ಮಾ ಎಂಬುವವರು ದಾಖಲಿಸಿದ ಪ್ರಕರಣದ ಬಗ್ಗೆ ಮಾಧ್ಯಮ ವರದಿಗಳು ಮಾಡಿವೆ. ಇದು ವರ್ಷಗಳ ಹಿಂದೆ ನಡೆದ ಹಳೆಯ ಪ್ರಕರಣವಾಗಿದ್ದು, ಪವನ್ ವರ್ಮಾ ಅವರು ಇತ್ಯರ್ಥ ಪತ್ರಕ್ಕೆ ಸಹಿ ಹಾಕಿದ್ದರು. ಒಪ್ಪಿಕೊಂಡ ಮೊತ್ತವನ್ನು ಸಂಪೂರ್ಣವಾಗಿ ಪಡೆದಿದ್ದರು. ಇದರ ಹೊರತಾಗಿಯೂ ಅವರು ಸುಳ್ಳು ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಿಸಿದ್ದಾರೆ. ನನ್ನ ವಕೀಲರು ಈ ವ್ಯಕ್ತಿಯ ಸುಳ್ಳುಗಳನ್ನು ಬಹಿರಂಗಪಡಿಸುತ್ತಾರೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡುವವರ ಮಾತುಗಳನ್ನು ನಿರ್ಲಕ್ಷಿಸಿ ಎಂದು ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.