ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆ ಅಸ್ತು

Last Updated 24 ಜುಲೈ 2019, 13:21 IST
ಅಕ್ಷರ ಗಾತ್ರ

ನವದೆಹಲಿ:ಕಾನೂನು ಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ವಿಧೇಯಕವನ್ನು ಬುಧವಾರ ಲೋಕಸಭೆ ಅಂಗೀಕರಿಸಿದೆ.ಉಗ್ರ ಕೃತ್ಯಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುವ ವಿಧೇಯಕ ಇದಾಗಿದೆ.

ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಈ ವಿಧೇಯಕ ಮಂಡಿಸಿದ್ದು ಇದರ ಪರ 287 ಮತಗಳು ಚಲಾವಣೆಯಾಗಿದ್ದು, ವಿಪಕ್ಷ ಸಭಾ ತ್ಯಾಗಮಾಡಿದೆ. ವಿಧೇಯಕದ ವಿರುದ್ದ 8 ಮತಗಳು ಚಲಾವಣೆಯಾಗಿದೆ.

ತಿದ್ದುಪಡಿಯನ್ನು ಸಮರ್ಥಿಸಿ ಮಾತನಾಡಿದ ಅಮಿತ್ ಶಾ, ಭಯೋತ್ಪಾದನೆ ಎಂಬುದು ಜನರ ಪ್ರವೃತ್ತಿ, ಅದು ಸಂಘಟನೆಯಲ್ಲ. ಉಗ್ರರನ್ನು ವೈಯಕ್ತಿಕವಾಗಿ ಉಗ್ರ ಎಂದು ಕರೆಯಬೇಕಾದ ಅಗತ್ಯವಿದೆ.ವಿಶ್ವಸಂಸ್ಥೆಯಲ್ಲಿ ಅದಕ್ಕಾಗಿ ಪ್ರಕ್ರಿಯೆಗಳಿವೆ. ಅಮೆರಿಕ, ಪಾಕಿಸ್ತಾನ, ಚೀನಾ, ಇಸ್ರೇಲ್, ಯುರೋಪ್ ರಾಷ್ಟ್ರಗಳಲ್ಲಿಯೂ ಇದೇ ರೀತಿ ಇದೆ.

ಉಗ್ರ ಸಂಘಟನೆಗಳನ್ನು ನಿಷೇಧ ಮಾಡಿದರೆ, ಈ ಉಗ್ರರು ಇನ್ನೊಂದು ಸಂಘಟನೆಯನ್ನು ಸುಲಭವಾಗಿ ಕಟ್ಟುತ್ತಾರೆ ಎಂದಿದ್ದಾರೆ ಅಮಿತ್ ಶಾ.

ಈ ಕಾನೂನು ವ್ಯಕ್ತಿಗಳನ್ನು ಟಾರ್ಗೆಟ್ ಮಾಡುವುದಕ್ಕಾಗಿ ದುರ್ಬಳಕೆಯಾಗುವ ಸಾಧ್ಯತೆ ಇದೆ ಎಂದು ಟಿಎಂಸಿ ಸಂಸದೆ ಮೊಹುವಾ ಮೊಯಿತ್ರಾ ವಿಧೇಯಕಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಈ ವಿಧೇಯಕಕ್ಕೆ ಅಂಗೀಕಾರ ಸಿಕ್ಕಿದರೆಇದು ದೇಶದ ಸಂಯುಕ್ತ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ ಎಂದು ಮೊಯಿತ್ರಾ ಹೇಳಿದ್ದಾರೆ.

ಯಾರಾನ್ನಾದರೂ ಟಾರ್ಗೆಟ್ ಮಾಡಬೇಕು ಎಂದು ಕೇಂದ್ರ ಸರ್ಕಾರ ಬಯಸುವುದಾದರೆ ಅದಕ್ಕಾಗಿ ಅವರು ಕಾನೂನಿನ ಸಹಾಯ ಬಯಸುತ್ತಾರೆ.ವಿಪಕ್ಷ, ಅಲ್ಪ ಸಂಖ್ಯಾತರು, ಮಾನವ ಹಕ್ಕು ಕಾರ್ಯಕರ್ತರು ಮತ್ತು ಇತರರು ಸರ್ಕಾರದ ವಿರುದ್ಧ ಮಾತನಾಡಿದರೆ ಅವರು ದೇಶ ವಿರೋಧಿ ಎಂದು ಮುದ್ರೆಯೊತ್ತಲಾಗುತ್ತದೆ ಎಂದು ಮೊಯಿತ್ರಾ ಗುಡುಗಿದ್ದಾರೆ.

ದೇಶದ ರಕ್ಷಣೆ ಮತ್ತು ನೀತಿ ವಿಷಯದಲ್ಲಿ ಸರ್ಕಾರದ ನಿಲುವಿನ ವಿರುದ್ಧ ವಿಪಕ್ಷಗಳು ವಿರೋಧ ವ್ಯಕ್ತ ಪಡಿಸಿದರೆ ಅವರನ್ಯಾಕೆ ದೇಶ ವಿರೋಧಿಗಳು ಎಂದು ಕರೆಯಲಾಗುತ್ತದೆ ಎಂದು ಮೊಯಿತ್ರಾ ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಅಮಿತ್ ಶಾ, ನಿಷ್ಕಪಟ ಸಾಮಾಜಿಕ ಕಾರ್ಯಕರ್ತರನ್ನು ಯಾರೊಬ್ಬರೂ ಪೀಡಿಸುವುದಿಲ್ಲ.ಕೆಲವೊಬ್ಬ ಸಾಮಾಜಿಕ ಕಾರ್ಯಕರ್ತರು ಉತ್ತಮ ಕೆಲಸಗಳನ್ನು ಮಾಡುತ್ತಾರೆ.ಆದರೆ ನಾವು ಅರ್ಬನ್ ಮಾವೋವಾದಿಗಳನ್ನುಮಟ್ಟಹಾಕುತ್ತೇವೆ.ಕಾನೂನು ಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ವಿಧೇಯಕ (ಯುಪಿಪಿಎ) ಬಗ್ಗೆ ಕಾಂಗ್ರೆಸ್ ಎರಡು ನಿಲುವು ಹೊಂದಿದೆ ಎಂದು ಶಾ ಆರೋಪಿದ್ದಾರೆ.

ನೀವು ವಿಪಕ್ಷದವರು ನಮ್ಮನ್ನು ಪ್ರಶ್ನಿಸುವಾಗ ಯಾರು ಈ ಕಾನೂನು ಮತ್ತು ವಿಧೇಯಕವನ್ನು ತಂದಿದ್ದಾರೆ ಎಂದು ನೋಡುವುದಿಲ್ಲ.ನೀವು ಅಧಿಕಾರದಲ್ಲಿದ್ದಾಗಲೇ ಇದನ್ನು ತಂದಿದ್ದು, ನೀವು ಅಧಿಕಾರದಲ್ಲಿದ್ದರೆ ನೀವು ಮಾಡಿದ್ದೆಲ್ಲ ಸರಿ ಎಂದಾದರೆ ಈಗ ನಾವು ಮಾಡುತ್ತಿರುವುದು ಕೂಡಾ ಸರಿ.ಸರ್ಕಾರಭಯೋತ್ಪಾದನೆ ವಿರುದ್ಧ ಹೋರಾಡುತ್ತದೆ. ಯಾವ ಪಕ್ಷ ಅಧಿಕಾರದಲ್ಲಿದೆಎಂಬುದು ಇಲ್ಲಿ ಮುಖ್ಯವಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT