ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್ ಶಾ ಒಡೆತನದ ಬ್ಯಾಂಕಿನಲ್ಲೇ ಹೆಚ್ಚು ಹಳೇನೋಟು ಸಂಗ್ರಹ?

Last Updated 28 ಸೆಪ್ಟೆಂಬರ್ 2018, 8:05 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಿರ್ದೇಶಕರಾಗಿರುವ ಅಹಮದಾಬಾದ್ ಜಿಲ್ಲಾ ಸಹಕಾರಬ್ಯಾಂಕಿನಲ್ಲಿ (ಎಡಿಸಿಬಿ) ₹745.59 ಕೋಟಿ ಮೌಲ್ಯದ ಹಳೆಯ ನೋಟಿನ ಠೇವಣಿ ಸ್ವೀಕರಿಸುತ್ತುಎಂಬ ವಿಷಯವನ್ನು ಮಾಹಿತಿ ಹಕ್ಕು ಕಾಯ್ದೆ ಮೂಲಕ ಸಲ್ಲಿಸಿದ ಅರ್ಜಿ ಬಹಿರಂಗಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8, 2016ರಂದು ₹500, ₹1000 ಮುಖಬೆಲೆಯ ನೋಟುಗಳನ್ನು ಅಪಮೌಲ್ಯೀಕರಣಗೊಳಿಸಿದ ಆರು ದಿನಗಳ ಬಳಿಕ ಅಂದರೆ ನವೆಂಬರ್ 14ರಂದು ಎಡಿಸಿಬಿಯಲ್ಲಿ ಕೋಟ್ಯಂತರ ರೂಪಾಯಿ ಮೊತ್ತದನಗದು ಜಮೆಯಾಗಿದೆ.

‘ಅಮಿತ್ ಶಾ ಅವರು ಹಲವು ವರ್ಷಗಳಿಂದ ಈ ಬ್ಯಾಂಕಿನ ಅವಿಭಾಜ್ಯ ಅಂಗವಾಗಿದ್ದಾರೆ. ಇನ್ನು ಹಲವು ವರ್ಷಗಳು ಬ್ಯಾಂಕ್ಜೊತೆ ಇರಲಿದ್ದಾರೆ. 2000ರಲ್ಲಿ ಅಮಿತ್ ಶಾ ಅಧ್ಯಕ್ಷರಾಗಿದ್ದರು. ಮಾರ್ಚ್ 31, 2017ರ ಹೊತ್ತಿಗೆಎಡಿಸಿಬಿ ಬ್ಯಾಂಕಿನ ಆದಾಯ 5,050 ಕೋಟಿ. 2016-17 ರಲ್ಲಿ ಲಾಭ ₹14.31 ಕೋಟಿಗೆ ಮುಟ್ಟಿದೆ’ ಎಂಬ ಮಾಹಿತಿ ಬ್ಯಾಂಕ್ ವೆಬ್‌ಸೈಟ್‌ನಲ್ಲಿದೆ.

ಬ್ಯಾಂಕಿನ ವೆಬ್‌ಸೈಟ್‌ನಲ್ಲಿರುವ ಈ ಅಂಶಗಳು ಅಮಿತ್ ಶಾ ಅವರ ಕಡೆ ಅನುಮಾನದಿಂದ ನೋಡುವಂತೆ ಮಾಡಿವೆ.

ಇನ್ನು ಬಿಜೆಪಿ ಪಾರುಪತ್ಯವಿರುವ ರಾಜ್‌ಕೋಟ್ ಜಿಲ್ಲಾ ಸಹಕಾರಿ ಬ್ಯಾಂಕಿನಲ್ಲೂ ₹693.19 ಕೋಟಿ ಮೌಲ್ಯದ ಹಳೆಯ ನೋಟು ಜಮೆಗೊಂಡಿದೆ.ಜಯೇಶ್‌ಬಾಯ್ ವಿಠಲ್‌ಬಾಯ್ ರಾದಾದಿಯಾ ಅವರು ಈ ಬ್ಯಾಂಕಿನ ಅಧ್ಯಕ್ಷರು. ಅವರುಗುಜರಾತಿನ ಮುಖ್ಯಮಂತ್ರಿ ವಿಜಯ್ ರೂಪಾನಿ ಸಂಪುಟದಲಲ್ಲಿ ಸಚಿವರೂ ಹೌದು. 2001ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ರಾಜ್‌ಕೋಟ್‌ನಿಂದಲೇ ಶಾಸಕರಾಗಿ ಆಯ್ಕೆಯಾಗಿದ್ದರು.

ಈ ಎರಡೂಬ್ಯಾಂಕುಗಳಲ್ಲಿ ಜಮೆಯಾಗಿರುವ ಹಣದ ಲೆಕ್ಕಾಚಾರಗಳಪ್ರಕಾರ ಗುಜರಾತಿನ ರಾಜ್ಯ ಸಹಕಾರಿ ಲಿಮಿಟೆಡ್ ಬ್ಯಾಂಕಿನ ಠೇವಣಿ ತೀರಾ ಕಡಿಮೆ. ಈ ಮೊತ್ತಇದ್ದು, ಕೇವಲ 1.11 ಕೋಟಿ ಮಾತ್ರ ಇದೆ.

ಆರ್‌ಟಿಐ ಮಾಹಿತಿ ಕೇಳಿದವರು

ಈ ಎಲ್ಲಾ ಮಾಹಿತಿ ಒದಗಿಸುವಂತೆ ಮುಂಬೈ ಮೂಲದ ಆರ್‌ಟಿಐ ಕಾರ್ಯಕರ್ತ ಮನೋರಂಜನ್ ಎಸ್. ರಾಯ್ ಅವರು ಮಾಹಿತಿ ಕೇಳಿದ್ದರು. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ(NABARD) ನಿರ್ವಾಹಣಾಧಿಕಾರಿ ಶರವಣವೇಲ್ ಅವರು ರಾಯ್ ಅವರಿಗೆ ಸಂಪೂರ್ಣ ಮಾಹಿತಿ ನೀಡಿದ್ದರು. ಇವರ ಈ ಪ್ರಯತ್ನದ ಫಲವಾಗಿ ಸಂಪೂರ್ಣ ವಿವರ ಹೊರಬಿದ್ದಿದೆ ಎಂದು ಐಎಎನ್‌ಎಸ್‌ ವರದಿ ಮಾಡಿದೆ.

ಆರ್‌ಟಿಐ ಮಾಹಿತಿ

ರಿಸರ್ವ್‌ ಬ್ಯಾಂಕ್ ಬಳಿ ಒಟ್ಟು ₹15.28 ಲಕ್ಷ ಕೋಟಿ ಮೌಲ್ಯದ ನಗದು ಸಂಗ್ರಹವಾಗಿದೆ. ಈ ಮೊತ್ತದಲ್ಲಿ ಅರ್ಧಕ್ಕೂ ಹೆಚ್ಚು(ಶೇ52) ಅಂದರೆ ₹7.91 ಕೋಟಿಮೌಲ್ಯದ ನಗದುಏಳು ಸಾರ್ವಜನಿಕ ವಲಯದ ಏಳು ಬ್ಯಾಂಕುಗಳಿಂದ₹7.91 ಲಕ್ಷ ಕೋಟಿ, 32 ವಾಣಿಜ್ಯ ಬ್ಯಾಂಕ್‌ಗಳಿಂದ₹6407 ಕೋಟಿ),370 ಡಿಸಿಸಿ ಬ್ಯಾಂಕ್‌ಗಳಿಂದ₹22,271 ಕೋಟಿ, 39ಅಂಚೆ ಕಚೇರಿಗಳಿಂದ₹4,408 ಕೋಟಿ ಸಂಗ್ರಹವಾಗಿತ್ತು.

ಆದರೆ ಈ ಮಾಹಿತಿ ಪರಿಪೂರ್ಣವಲ್ಲ. ನಮ್ಮ ದೇಶದಲ್ಲಿ ಒಟ್ಟು 21 ಸರ್ಕಾರಿ ಬ್ಯಾಂಕ್‌ಗಳು 92,500 ಶಾಖೆಗಳಿವೆ. ಈ ಪೈಕಿ ಕೇವಲ ಕೇವಲ ಏಳು ಬ್ಯಾಂಕ್‌ಗಳು 29,000 ಶಾಖೆಗಳು ಮಾತ್ರ ಮಾಹಿತಿ ನೀಡಿವೆ. 14 ಸರ್ಕಾರಿ ಬ್ಯಾಂಕ್‌ಗಳು ಒಂದಲ್ಲ ಒಂದು ಕಾರಣಕ್ಕೆ ಮಾಹಿತಿ ನೀಡುವುದರಿಂದ ತಪ್ಪಿಸಿಕೊಂಡಿವೆ.

ನೋಟು ಅಪಮೌಲ್ಯೀಕರಣಗೊಳಿಸಿದ ಒಂದೂವರೆ ವರ್ಷಗಳಬಳಿಕ ದೇಶದಲ್ಲಿ ಚಲಾವಣೆಯಲ್ಲಿದ್ದ ಒಟ್ಟು ನಗದಿನಪೈಕಿ ಶೇ 99ರಷ್ಟು ಅಂದರೆ₹15.28ಲಕ್ಷ ಕೋಟಿ ಮೊತ್ತದಹಳೆಯ ನೋಟು ಆರ್‌ಬಿಐ ತೆಕ್ಕೆಗೆ ಬಂದಿವೆಎಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಈ ಸಂದರ್ಭ ದೇಶದಲ್ಲಿ ಒಟ್ಟು ₹15.44 ಲಕ್ಷ ಕೋಟಿ ನಗದು ಚಲಾವಣೆಯಲ್ಲಿತ್ತು.ಕೆಲವೇ ಹಣಕಾಸು ಸಂಸ್ಥೆಗಳಿಂದ ಅರ್ಧದಷ್ಟು ನಗದು ರಿಸರ್ವ್‌ ಬ್ಯಾಂಕ್‌ಗೆ ಬಂದಿರುವುದು ಗಮನಾರ್ಹ ಸಂಗತಿ ಎಂದು ಆರ್‌ಟಿಐ ಕಾರ್ಯಕರ್ತ ರಾಯ್ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯವಾರು ಮಾಹಿತಿ

* ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಒಟ್ಟು 55 ಶಾಖೆಗಳನ್ನೊಳಗೊಂಡಿದೆ, ಇದರಲ್ಲಿ ಒಟ್ಟು ₹1,128 ಕೋಟಿ ಹಣ ಜಮೆಗೊಂಡಿದ್ದು, ಠೇವಣಿದಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿನ ಜನಸಂಖ್ಯೆ 12 ಕೋಟಿ.

* ಕೇವಲ 5 ಶಾಖೆಗಳನ್ನೊಳಗೊಂಡಿರುವ ಜಾರ್ಖಂಡ್ ರಾಜ್ಯ ಸಹಕಾರಿ ಬ್ಯಾಂಕು 5₹.94 ಕೋಟಿ ಇದ್ದು, ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇಲ್ಲಿರುವುದು 3.6 ಕೋಟಿ ಜನಸಂಖ್ಯೆ.

* ಅಂಡಮಾನ್ ಮತ್ತು ನಿಕೋಬಾರ್ ರಾಜ್ಯ ಸಹಕಾರಿ ಬ್ಯಾಂಕ್ 29 ಶಾಖೆಗಳನ್ನೊಳಗೊಂಡು ₹85.76 ಕೋಟಿ ಸಂಗ್ರಹವಿದೆ. ಇಲ್ಲಿ ನಾಲ್ಕು ಲಕ್ಷಕ್ಕೂ ಕಡಿಮೆ ಜನಸಂಖ್ಯೆ ಇದ್ದು, ಬ್ಯಾಂಕಿಂಗ್ ವಲಯದಲ್ಲಿ ವೇಗ ಸಾಧಿಸಿರುವುದು ಆಶ್ಚರ್ಯಕರವಾಗಿದೆ.

ಸುದ್ದಿಯೇ ಮಾಯ:

ಅಮಿತ್ ಶಾ ಒಡೆತನದ ಬ್ಯಾಂಕಿನಲ್ಲಿ ಹೆಚ್ಚು ಅಪಮೌಲ್ಯೀಕರಣ ಹಣ ಸಂಗ್ರಹವಾಗಿರುವ ಬಗ್ಗೆ ರಿಲಾಯನ್ಸ್ ಒಡೆತನದ ಟೈಮ್ಸ್ ನೌ, ನ್ಯೂಸ್18.ಕಾಂ, ಫಸ್ಟ್‌ ಪೋಸ್ಟ್, ಮತ್ತು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸುದ್ದಿ ಜಾಲತಾಣಗಳು ಜೂನ್ 21ರಂದು ಯಾವುದೇ ಸ್ಪಷ್ಟಿಕರಣ ನೀಡದೇ ಸುದ್ದಿಯನ್ನು ವೆಬ್‌ಸೈಟ್‌ನಿಂದ ತೆಗೆದು ಹಾಕಿವೆ. ಸಂಪಾದಕರು ಕೂಡ ಇದರ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ.

ಈ ಬಗ್ಗೆ ದ ವೈರ್ ವೆಬ್‌ಸೈಟ್ಪ್ರಶ್ನಿಸಿದಾಗ, ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾದ ತಕ್ಷಣ ಸುದ್ದಿಯನ್ನು ಪ್ರಕಟಿಸುವುದಾಗಿ ಹೇಳಿ ನಾಜೂಕಾಗಿ ಜಾರಿಕೊಂಡಿವೆ.



ಇದು ಮೊದಲೇನು ಅಲ್ಲ
ಬಿಜೆಪಿ ಮುಖಂಡರ ವಿರುದ್ಧವಾಗಿ ಹರಿದಾಡಿದ ಸುದ್ದಿಗಳನ್ನು ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಮಾಯವಾಗಿರುವುದು ಇದು ಮೊದಲೇನು ಅಲ್ಲ. ಈ ಹಿಂದೆಯೂ 2017ರಲ್ಲಿ ಅಹಮದಾಬಾದಿನ ಟೈಮ್ಸ್ ಆಪ್ ಇಂಡಿಯಾ ಸುದ್ದಿ ಸಂಸ್ಥೆ ಅಮಿತ್ ಶಾ ಅವರ ಆಸ್ತಿ ಶೇ 300ರಷ್ಟು ಹೆಚ್ಚಳ ಎಂಬ ಸುದ್ದಿಯನ್ನು ಬಿತ್ತರಿಸಿತ್ತು. ಆಗ ಸಹ ಕೆಲವೇ ಗಂಟೆಗಳಲ್ಲಿ ಈ ಸುದ್ದಿ ಹೇಳ ಹೆಸರಿಲ್ಲದಂತೆ ಕಣ್ಮರೆಯಾಗಿತ್ತು.

ಟೆಕ್ಸ್‌ಟೈಲ್ಸ್ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿ ಅವರ ಪದವಿ ಪಡೆಯದಿರುವ ವಿಚಾರದ ಡಿಎನ್‌ಎ ಮತ್ತು ಔಟ್ ಲುಕ್‌ ಸುದ್ದಿ ಪ್ರಕಟಿಸಿ ಕೆಲವೇ ಗಂಟೆಗಳಲ್ಲಿ ತೆಗೆದು ಹಾಕಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT