ನಾಥನಪುರ: ಅಸ್ಸಾಂನಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಚಾರ್ ಬಳಿ ಭಾರತ–ಬಾಂಗ್ಲಾ ಗಡಿಯ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು.

ಈ ವೇಳೆ ಅಮಿತ್ ಶಾ ಅವರಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್ ಬಿಸ್ವ ಶರ್ಮಾ ಹಾಗೂ ಬಿಎಸ್ಎಫ್ನ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು.

ಅಂತರರಾಷ್ಟ್ರೀಯ ಗಡಿಯ ಭದ್ರತಾ ಸ್ಥಿತಿಗತಿಗಳನ್ನು ಪರಿಶೀಲಿಸಿದ ಸಚಿವರು, ಭದ್ರತೆಯಲ್ಲಿ ಎಳ್ಳಷ್ಟೂ ಲೋಪವಾಗದಿರುವಂತೆ ಕ್ರಮ ಕೈಗೊಳ್ಳಬೇಕು ಎಂದು ಬಿಎಸ್ಎಫ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಾಚಾರ್ ಬಳಿ ನಿರ್ಮಿಸಲಾಗಿರುವ ಬಿಎಸ್ಎಫ್ನ ಅತ್ಯಾಧುನಿಕ ಶಸ್ತ್ರಾಸ್ತಗಳ ಕೊಠಡಿ ಹಾಗೂ ಹುತಾತ್ಮ ಬಿಎಸ್ಎಫ್ ಯೋಧರ ಸ್ಮಾರಕವನ್ನು ಅಮಿತ್ ಶಾ ಪರಿಶೀಲಿಸಿದರು. ಜೊತೆಗೆ ಅಲ್ಲಿ ಆಲದ ಗಿಡವೊಂದನ್ನು ನೆಟ್ಟರು.

ಅಸ್ಸಾಂ ರಾಜ್ಯವು ಬಾಂಗ್ಲಾದೇಶದೊಂದಿಗೆ 267.5 ಕಿ.ಮೀ ಗಡಿ ಹಂಚಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.