ನವದೆಹಲಿ:ದೆಹಲಿ ಮತದಾರರು ಬಿಜೆಪಿಗೆ ಬಟನ್ ಒತ್ತುವ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧಿಸುವವರು ಈ ಸ್ಥಳದಿಂದ ಅವರಾಗಿಯೇ ಹೊರಹೋಗಬೇಕು ಆ ರೀತಿ ಮಾಡಿಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ರಂಗೇರುತ್ತಿದ್ದು, ಹಲವು ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕೈಗೊಂಡಿವೆ, ಭಾನುವಾರ ಗಣರಾಜ್ಯೋತ್ಸವ ದಿನಾಚರಣೆ ಇದ್ದರೂ ಗೃಹಮಂತ್ರಿ ಅಮಿತ್ ಶಾ ಇಲ್ಲಿ ಬಹಿರಂಗ ಪ್ರಚಾರ ನಡೆಸಿದರು.

ಇವರ ಜೊತೆ ದೆಹಲಿಯ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಸಾತ್ ನೀಡಿದರು. ಭಾನುವಾರ ಇಲ್ಲಿನ ಗೊಂಡಾ ವಿಧಾನ ಸಭಾ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಬಿಜೆಪಿ ಅಭ್ಯರ್ಥಿ ಅಜಯ್ ಮಹಾವತ್ ಪರ ಶಾ ಪ್ರಚಾರ ನಡೆಸಿದರು. ಫೆ.8ರಂದು ಈ ಮತದಾನ ನಡೆಯಲಿದ್ದು, ಫೆ.11ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ:ಚುನಾವಣಾ ಅಖಾಡದ ಅಮಿತ್ ‘ಶಾ’

ಈ ಸಮಯದಲ್ಲಿ ಮಾತನಾಡಿದ ಶಾ,ದೆಹಲಿಗೆ ಶುದ್ಧಗಾಳಿ, ಪರಿಶುದ್ಧ ವಾತಾವರಣ, ಇಲ್ಲಿನ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು, ಅನಿಯಂತ್ರಿತ ವಿದ್ಯುತ್, ಮಕ್ಕಳಿಗೆ ಉತ್ತಮ ಶಿಕ್ಷಣ, ವಿಶ್ವದರ್ಜೆಯ ರಸ್ತೆಗಳು, ಟ್ರಾಫಿಕ್ ಜಾಮ್ ಇಲ್ಲದಂತಹ ರಸ್ತೆಗಳು ಬೇಕಾಗಿವೆ. ಇವೆಲ್ಲವೂ ಇರಬೇಕೆಂದರೆ, ಬಿಜೆಪಿಗೆ ಮತ ನೀಡಬೇಕು ಎಂದು ಶಾ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.