ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಳಿ ವಿವಾದ: ತರಗತಿ ಬಹಿಷ್ಕರಿಸಿದ ಅಲಿಗಢ ವಿ.ವಿ ವಿದ್ಯಾರ್ಥಿಗಳು

Published 22 ಮಾರ್ಚ್ 2024, 14:18 IST
Last Updated 22 ಮಾರ್ಚ್ 2024, 14:18 IST
ಅಕ್ಷರ ಗಾತ್ರ

ಅಲಿಗಢ: ಹೋಳಿ ಆಚರಣೆ ವಿವಾದದ ಹಿನ್ನೆಲೆಯಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪೊಂದು ಶುಕ್ರವಾರ ತರಗತಿಯನ್ನು ಬಹಿಷ್ಕರಿಸಿದೆ.

ಹೋಳಿ ಆಚರಣೆ ಸಂಬಂಧ ಎರಡು ಗುಂಪುಗಳ ನಡುವೆ ನಡೆದಿರುವ ಗಲಾಟೆ ಸಂಬಂಧವಾಗಿ ಏಕಪಕ್ಷೀಯವಾಗಿ ಕ್ರಮಕೈಗೊಂಡಿರುವುದನ್ನು ಖಂಡಿಸಿ ತರಗತಿ ಬಹಿಷ್ಕರಿಸುವಂತೆ ವಿದ್ಯಾರ್ಥಿ ನಾಯಕರು ಕರೆ ಕೊಟ್ಟಿದ್ದರು.

‘ಶುಕ್ರವಾರ ಬೆಳಿಗ್ಗೆ ತರಗತಿ ಆರಂಭವಾದ ಕೆಲ ಹೊತ್ತಿನಲ್ಲಿ ಆಗಮಿಸಿದ ವಿದ್ಯಾರ್ಥಿ ಗುಂಪೊಂದು ಉಳಿದ ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸುವಂತೆ ಪ್ರೇರೆಪಿಸಿತು’ ಎಂದು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರದ ಪ್ರಾರ್ಥನೆಯ ಬಳಿಕ ಪ್ರತಿಭಟನಾ ಜಾಥಾ ನಡೆಸುವಂತೆ ವಿದ್ಯಾರ್ಥಿ ಗುಂಪು ಕರೆ ಕೊಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT