ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಮೇಲ್ಸೇತುವೆ ಕುಸಿತ: ಸಮಯಪ್ರಜ್ಞೆ ಮೆರೆದ ರೈಲು ಚಾಲಕ

Last Updated 3 ಜುಲೈ 2018, 11:22 IST
ಅಕ್ಷರ ಗಾತ್ರ

ಮುಂಬೈ: ಜೀವಕೊಟ್ಟವರು ಮತ್ತುಜೀವ ಉಳಿಸಿದವರು ದೇವರಿಗೆ ಸಮಾನ ಎಂಬುದು ಹಿರಿಯರ ಅನುಭವದ ಮಾತು. ಇದು ಮುಂಬೈನ ವರುಣನ ಆರ್ಭಟಕ್ಕೆ ಸಿಲುಕಿದ ಜನರ ಬದುಕಿಗೆ ಸಂದರ್ಭೋಚಿತವಾಗಿದೆ.

ಮುಂಬೈನಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಂಧೇರಿ ಪಶ್ಚಿಮ ಭಾಗದಿಂದ ಪೂರ್ವಕ್ಕೆ ಸಂಪರ್ಕ ಕಲ್ಪಿಸುವ ಗೋಘಲೆ ಮೇಲ್ಸೇತುವೆಯ ಪಾದಾಚಾರಿ ಮಾರ್ಗ ಕುಸಿಯುವುದನ್ನು ಕಂಡ ರೈಲಿನ ಚಾಲಕ ಸಮಯಪ್ರಜ್ಞೆ ಮೆರೆದು ಪ್ರಯಾಣಿಕರ ಜೀವ ಉಳಿಸಿ ದೇವರಾಗಿದ್ದಾರೆ.

ಚಂದ್ರಶೇಖರ್ ಸಾವಂತ್ ನೂರಾರು ಪ್ರಯಾಣಿಕರ ಪಾಲಿನ ದೇವರು ಹಾಗೂ ಹೀರೊ. ಇವರು 1997ರಿಂದ ರೈಲು ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಬಗ್ಗೆ ಜೀ ನ್ಯೂಸ್‌ಗೆ ಪ್ರತಿಕ್ರಿಯಿಸಿರುವ ಸಾವಂತ್, ಎಂದಿನಂತೆ ಮಂಗಳವಾರ ಬೆಳಿಗ್ಗೆ ರೈಲು ಚಲಾಯಿಸಿಕೊಂಡ ಬಂದೆ. ಆಗ ಅಂಧೇರಿಯಿಂದ ಸ್ವಲ್ಪ ದೂರದಲ್ಲಿಯೇ ಪಾದಚಾರಿ ಮೇಲ್ಸೇತುವೆ ಕೆಳಗೆ ಬೀಳುತ್ತಿರುವುದನ್ನು ಗಮನಿಸಿದೆ. ಅನಾಹುತದಿಂದ ಪ್ರಯಾಣಿಕರನ್ನು ಕಾಪಾಡುವಸಲುವಾಗಿ ತಕ್ಷಣವೇ ಬ್ರೇಕ್ ಹಾಕಿದೆ ಎಂದು ಹೇಳಿದ್ದಾರೆ.

ಇವರ ಈ ಸಮಯಪ್ರಜ್ಞೆಗೆ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆಯ ಮಹಾಪೂರವೇ ಹರಿದು ಬಂದಿದೆ.

ಪ್ರಯಾಣಿಕರ ಪ್ರಾಣ ಉಳಿಸಿದ ಹೀರೋಗೆ ಹ್ಯಾಟ್ಸ್ ಆಫ್ ಎಂದು ಜನ ಪಂಕಜ್ ಭಯಾನಿ ಎಂಬುವರೊಬ್ಬರು ಟ್ವೀಟ್ ಮಾಡಿದ್ದಾರೆ.


ಸಂಗಮ್ ಸಿಂಗಮ್ ಎಂಬುವರು ಕೂಡ ಸಾವಂತ್ ಅವರ ಸಮಯಪ್ರಜ್ಞೆಯನ್ನು ಕೊಂಡಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT