ಅಮರಾವತಿ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ಪುತ್ರಿ ಮತ್ತು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈ.ಎಸ್. ಶರ್ಮಿಳಾ ಅವರು ಈ ವಾರಾಂತ್ಯಕ್ಕೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಸಲುವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತಿತರರು ಈಚೆಗೆ ಆಂಧ್ರ ಪ್ರದೇಶದ ಮುಖಂಡರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿ, ಚರ್ಚಿಸಿದ್ದರು.

ಈ ಸಂದರ್ಭದಲ್ಲಿ, ಶರ್ಮಿಳಾ ಅವರ ಸೇರ್ಪಡೆಯು ಪಕ್ಷದ ಪುನಶ್ಚೇತನಕ್ಕೆ ನೆರವಾಗಲಿದೆ ಎಂದು ಆಂಧ್ರಪ್ರದೇಶದ ನಾಯಕರು ಹೈಕಮಾಂಡ್‌ಗೆ ತಿಳಿಸಿದ್ದರು. ಸಭೆಯಲ್ಲಿ ಭಾಗಿಯಾಗಿದ್ದ ಶೇ 90ರಷ್ಟು ನಾಯಕರು ಶರ್ಮಿಳಾ ಸೇರ್ಪಡೆ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿದ್ದವು.

ತೆಲಂಗಾಣದಲ್ಲಿ ತಮ್ಮದೇ ಪ್ರತ್ಯೇಕ ಪಕ್ಷ ಸ್ಥಾಪಿಸಿರುವ ಶರ್ಮಿಳಾ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು.

ಈ ಎಲ್ಲಾ ಬೆಳವಣಿಗೆಗಳು ಮಧ್ಯೆ ಶರ್ಮಿಳಾ ಅವರು ಇತ್ತೀಚೆಗೆ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ್ದರು.

ಇದೇ ವರ್ಷ ಲೋಕಸಭೆ ಮತ್ತು ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಶರ್ಮಿಳಾ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದರಿಂದ ಪಕ್ಷಕ್ಕೆ ಮತ್ತಷ್ಟು ಬಲ ತುಂಬಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
.ವೈ.ಎಸ್ ಶರ್ಮಿಳಾ ಸೇರ್ಪಡೆಗೆ ಆಂಧ್ರ ಕಾಂಗ್ರೆಸ್ ಇಂಗಿತ.Telangana Election: ಸೋನಿಯಾ ಗಾಂಧಿ –ರಾಹುಲ್ ಭೇಟಿಯಾದ ವೈ.ಎಸ್. ಶರ್ಮಿಳಾ.ಡಿ.ಕೆ ಶಿವಕುಮಾರ್ರನ್ನು ಭೇಟಿಯಾದ ವೈಎಸ್ಎರ್ ಪುತ್ರಿ ಶರ್ಮಿಳಾ.ತೆಲಂಗಾಣ ಅಫ್ಗಾನಿಸ್ತಾನ, ಕೆಸಿಆರ್ ತಾಲಿಬಾನ್: ವೈಎಸ್ ಶರ್ಮಿಳಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.