ಕೊಲಂಬೊ: ‘ರಾಜಪಕ್ಸೆ‘ ಸಹೋದರರಲ್ಲಿ ಕಿರಿಯರಾಗಿರುವ ಬೆಸಿಲ್ ರಾಜಪಕ್ಸೆ ಅವರು ಗುರುವಾರ ಶ್ರೀಲಂಕಾ ಸರ್ಕಾರದ ಹಣಕಾಸು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಶ್ರೀಲಂಕಾದ ಅಧ್ಯಕ್ಷ ಗೋಟಬಯಾ ರಾಜಪಕ್ಸೆ, ಪ್ರಧಾನಿ ಮಹಿಂದಾ ರಾಜಪಕ್ಸೆ, ಕೃಷಿ ಸಚಿವ ಚಮಲ್ ರಾಜಪಕ್ಸೆ ಈಗಾಗಲೇ ಅಧಿಕಾರದಲ್ಲಿದ್ದಾರೆ. 70 ವರ್ಷದಕೊನೆಯ ಸಹೋದರ ಬೆಸಿಲ್ ರಾಜಪಕ್ಸೆ ಈಗ ಸಚಿವ ಸಂಪುಟವನ್ನು ಪ್ರವೇಶಿಸಿದ್ದಾರೆ. ಈ ಮೂಲಕ ಸರ್ಕಾರದೊಳಗಿರುವ ತಮ್ಮ ಕುಟುಂಬದ ಶಕ್ತಿಯನ್ನು ಮತ್ತಷ್ಟು ವೃದ್ಧಿಸಿಕೊಂಡಿದ್ದಾರೆ.

ಬೆಸಿಲ್ ಅವರು ಸಚಿವ ಸಂಪುಟ ಪ್ರವೇಶಿಸುವ ಮೂಲಕ ರಾಜಪಕ್ಸೆ ಕುಟುಂಬದ ಏಳು ಸದಸ್ಯರು ಸರ್ಕಾರದ ಉನ್ನತ ಸ್ಥಾನಗಳಿಗೆ ಏರಿದಂತಾಗಿದೆ.

ಮಹಿಂದಾ ಅವರ ಹಿರಿಯ ಪುತ್ರ ಚಮಲ್ ಸಂಪುಟ ದರ್ಜೆಯ ಸಚಿವರಾಗಿದ್ದು, ಕ್ರೀಡಾ ಖಾತೆ ನಿರ್ವಹಿಸುತ್ತಿದ್ದಾರೆ. ಚಮಲ್ ರಾಜಪಕ್ಸೆ ಪುತ್ರ ಶಶೀಂದ್ರ ಸಚಿವ ಸಂಪುಟದಲ್ಲಿ ರಾಜ್ಯ ಸಚಿವರಾಗಿದ್ದಾರೆ. ಸರ್ಕಾರದ ಬೆನ್ನೆಲುಬಾಗಿರುವ ನಿಪುನಾ ರಣವಾಕ ಅವರು ರಾಜಪಕ್ಸೆ ಸೋದರ ಸಂಬಂಧಿ.

ಅಮೆರಿಕ ಮತ್ತು ಶ್ರೀಲಂಕಾದ ಪೌರತ್ವ ಹೊಂದಿರುವ ಬೆಸಿಲ್, 2020ರ ಆಗಸ್ಟ್ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿ ಸಂಸತ್ ಪ್ರವೇಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.