ನವದೆಹಲಿ: ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧ, ಸೋಂಕು ನಿರೋಧಕ ಔಷಧಗಳು ಸೇರಿದಂತೆ ಒಟ್ಟು 34 ಔಷಧಗಳನ್ನು ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಇದರೊಂದಿಗೆ ಪಟ್ಟಿಯಲ್ಲಿರುವ ಔಷಧಗಳ ಒಟ್ಟು ಸಂಖ್ಯೆ 384ಕ್ಕೆ ಏರಿದೆ.

ರಾಷ್ಟ್ರೀಯ ಪಟ್ಟಿಗೆ ಸೇರಿಸುವುದರೊಂದಿಗೆ ಈ ಔಷಧಗಳ ದರವು ಸ್ವಲ್ಪಮಟ್ಟಿಗೆ ಇಳಿಯಲಿದ್ದು, ಕೈಗೆಟುಕುವಂತೆ ಇರಲಿದೆ. ಇನ್ನೊಂದೆಡೆ, ರ‍್ಯಾನಿಟೈಡೈನ್, ಸುಕ್ರಲ್‌ಫೇಟ್, ವೈಟ್ ಪೆಟ್ರೊಲಾಟಂ, ಅಟೆನೊಲೊಲ್ ಸೇರಿದಂತೆ 26 ಔಷಧಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಔಷಧಗಳ ದರ ಮತ್ತು ಪರ್ಯಾಯವಾಗಿ ಇನ್ನೂ ಉತ್ತಮ ಔಷಧಗಳು ಲಭ್ಯವಿದೆ ಎಂಬ ಮಾನದಂಡ ಆಧಾರದಲ್ಲಿ ಇವುಗಳನ್ನು ಕೈಬಿಡಲಾಗಿದೆ.

ಪರಿಷ್ಕೃತ ಪಟ್ಟಿ ಬಿಡುಗಡೆ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಅವರು ಮಂಗಳವಾರ ಟ್ವೀಟ್ ಮಾಡಿದ್ದಾರೆ. 27 ವರ್ಗದಲ್ಲಿ ಒಟ್ಟು 384 ಔಷಧಗಳು ಪಟ್ಟಿಯಲ್ಲಿವೆ. ಹಲವು ರೋಗ ನಿರೋಧಕ ಔಷಧಗಳು, ಲಸಿಕೆಗಳು, ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಗಳು ಇವೆ. ಇವು, ಇನ್ನಷ್ಟು ಕೈಗೆಟಕುವ ದರಕ್ಕೆ ಲಭ್ಯವಾಗಲಿದ್ದು, ರೋಗಿಗಳ ಮೇಲಿನ ಆರ್ಥಿಕ ಹೊರೆ ಇಳಿಯಲಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.