ನವದೆಹಲಿ: ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಭರತ್ ಪನ್ನು ಅವರು ಏಕವ್ಯಕ್ತಿ ಸೈಕ್ಲಿಂಗ್ ಮೂಲಕ ಕಳೆದ ವರ್ಷ ಅಕ್ಟೋಬರ್ನಲ್ಲಿ ಎರಡು ಬಾರಿ ಗಿನ್ನಿಸ್ ವಿಶ್ವ ದಾಖಲೆ ಬರೆದಿದ್ದಾರೆ.

‘2020 ಅಕ್ಟೋಬರ್ 10 ರಂದು ಲೇಹ್ನಿಂದ ಮನಾಲಿಯ ದೂರವನ್ನು (472 ಕಿ.ಮೀ) ಕೇವಲ 35 ಗಂಟೆ 25 ನಿಮಿಷಗಳಲ್ಲಿ ಕ್ರಮಿಸಿದ್ದರು. ಈ ಮೂಲಕ ಭರತ್ ಪನ್ನು ಅವರು ತಮ್ಮ ಮೊದಲ ಗಿನ್ನಿಸ್ ವಿಶ್ವ ದಾಖಲೆ ಬರೆದಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.

‘ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಕ್ಕೆ ಸಂಪರ್ಕ ಕಲ್ಪಿಸುವ 5,942 ಕಿ.ಮೀ ಉದ್ದದ ‘ಗೋಲ್ಡನ್ ಕ್ವಾಡ್ರಿಲ್ಯಾಟರಲ್’ ಮಾರ್ಗವನ್ನು 14 ದಿನ, 23 ಗಂಟೆ 52 ನಿಮಿಷಗಳಲ್ಲಿ ಕ್ರಮಿಸುವ ಮೂಲಕ ಭರತ್ ಅವರು ಎರಡನೇ ಗಿನ್ನಿಸ್ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ’ ಅವರು ಹೇಳಿದರು.

ಇದನ್ನೂ ಓದಿ:ಕೃಷ್ಣಗಿರಿಯಲ್ಲಿ ಹಿಡಿದ ಆನೆಯನ್ನು ಎಂಟಿಆರ್ಗೆ ಬಿಟ್ಟ ಅರಣ್ಯ ಇಲಾಖೆ

‘ಈ ಸೈಕ್ಲಿಂಗ್ ಕಾರ್ಯಕ್ರಮವು ಅಕ್ಟೋಬರ್ 16ರಂದು ಇಂಡಿಯಾ ಗೇಟ್ನಿಂದ ಪ್ರಾರಂಭಗೊಂಡು, ಅಕ್ಟೋಬರ್ 30ರಂದು ಅದೇ ಸ್ಥಳದಲ್ಲಿ ಮುಕ್ತಾಯಗೊಂಡಿತು. ಕೆಲವು ದಿನಗಳ ಹಿಂದೆಯಷ್ಟೇ ಎರಡು ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣಪತ್ರಗಳನ್ನು ಅವರಿಗೆ ಹಸ್ತಾಂತರಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.