ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಯಲ್ಲಿ ತಂತ್ರಜ್ಞಾನ ಘಟಕ ರಚನೆ

Published 18 ಮಾರ್ಚ್ 2024, 16:52 IST
Last Updated 18 ಮಾರ್ಚ್ 2024, 16:52 IST
ಅಕ್ಷರ ಗಾತ್ರ

ನವದೆಹಲಿ: ಕೃತಕ ಬುದ್ಧಿಮತ್ತೆ (ಎ.ಐ), 6ಜಿ, ಮಷಿನ್‌ ಲರ್ನಿಂಗ್‌ ಮತ್ತು ಕ್ವಾಂಟಮ್‌ ಕಂಪ್ಯೂಟಿಂಗ್‌ ಮೊದಲಾದ ಭವಿಷ್ಯದ ಸಂವಹನ ತಂತ್ರಜ್ಞಾನಗಳನ್ನು ಸೇನಾಪಡೆಗಳಿಗೆ ಬಳಸುವ ಕುರಿತು ಸಂಶೋಧನೆ ನಡೆಸಲು ಮತ್ತು ಮೌಲ್ಯಮಾಪನ ಮಾಡಲು ಭಾರತೀಯ ಸೇನೆಯು ತಂತ್ರಜ್ಞಾನ ಘಟಕವನ್ನು ರಚಿಸಿದೆ.

ಸಿಗ್ನಲ್‌ ಟೆಕ್ನಾಲಜಿ ಇವ್ಯಾಲುವೇಶನ್‌ ಆ್ಯಂಡ್‌ ಅಡಾಪ್ಶನ್‌ ಗ್ರೂಪ್‌ (ಎಸ್‌ಟಿಇಎಜಿ) ಎಂದು ಈ ಘಟಕಕ್ಕೆ ಹೆಸರಿಡಲಾಗಿದೆ.

ಭವಿಷ್ಯದಲ್ಲಿ ಯುದ್ಧರಂಗದ ಚಿತ್ರಣವನ್ನೇ ಬದಲಾಯಿಸುವ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುವುದು ಮತ್ತು ಸಂಶೋಧನೆ ನಡೆಸುವುದು ಈ ಘಟಕದ ಮುಖ್ಯ ಕೆಲಸವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮೊಬೈಲ್‌ ಸಂ‌ವಹನ, ಯುದ್ಧದಲ್ಲಿ ಬಳಕೆ ಮಾಡುವ ಎಲೆಕ್ಟ್ರಾನಿಕ್‌ ವ್ಯವಸ್ಥೆ ಸೇರಿದಂತೆ ಮುಂಬರುವ ಸಂಕೀರ್ಣ ತಂತ್ರಜ್ಞಾನಗಳನ್ನು ಕೇಂದ್ರೀಕರಿಸಿ  ಎಸ್‌ಟಿಇಎಜಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.

ಯುದ್ಧರಂಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸುವ ಕುರಿತು ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಅವರು ದೂರದೃಷ್ಟಿ ಹೊಂದಿದ್ದಾರೆ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT