ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಸ್‌ ವೇಷ ಧರಿಸಿ ಸ್ನೇಹಿತನ ಪತ್ನಿಯನ್ನು ಕೊಲ್ಲಲು ಯತ್ನಿಸಿದ ಮಹಿಳೆಯ ಬಂಧನ!

Published 5 ಆಗಸ್ಟ್ 2023, 12:45 IST
Last Updated 5 ಆಗಸ್ಟ್ 2023, 12:45 IST
ಅಕ್ಷರ ಗಾತ್ರ

ಪತ್ತನಂತಿಟ್ಟ(ಕೇರಳ): ಖಾಸಗಿ ಆಸ್ಪತ್ರೆಯಲ್ಲಿ ಸುಶ್ರೂಷಕಿ (ನರ್ಸ್) ಪೋಷಾಕು ಧರಿಸಿ ಸ್ನೇಹಿತನ ಪತ್ನಿಯನ್ನು ಕೊಲ್ಲಲು ಯತ್ನಿಸಿದ ಪ್ರಕರಣ ಕೇರಳದ ಪತ್ತನಂತಿಟ್ಟದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಅನುಷ್ಕಾ(30) ಎಂದು ಗುರುತಿಲಾಗಿದೆ.

ಸ್ನೇಹ (24) ಎಂಬುವವರು ಹೆರಿಗೆಯ ನಂತರದ ಆರೈಕೆಯ ಸಲುವಾಗಿ ಆಸ್ಪತ್ರೆಯಲ್ಲಿಯೇ ಉಳಿದುಕೊಂಡಿದ್ದರು. ಈ ವೇಳೆ ಅನುಷ್ಕಾ ನರ್ಸ್‌ ಪೋಷಾಕು ಧರಿಸಿ ಕೊಠಡಿ ಪ್ರವೇಶಿಸಿದ್ದಾಳೆ. ಚುಚ್ಚುಮದ್ದು ನೀಡಬೇಕು ಎಂದಿದ್ದಾಳೆ. ಆದರೆ ಖಾಲಿ ಸಿರೆಂಜ್ ಬಳಸಿ ಚುಚ್ಚುಮದ್ದು ನೀಡಲು ವಿಫಲಳಾಗಿದ್ದು, ಸುತ್ತಮುತ್ತಲಿರುವವರಿಗೆ ಅನುಮಾನ ತರಿಸಿದೆ.

ಜೊತೆಗೆ ಸ್ನೇಹಾ ಅವರ ತಾಯಿಗೆ ಈಕೆಯ ವರ್ತನೆ ಅನುಮಾನ ತರಿಸಿದೆ. ಅವರು ಅನುಷ್ಕಾ ವರ್ತನೆಯನ್ನು ಇತರ ಸುಶ್ರೂಷಕಿಯರಿಗೆ ತಿಳಿಸಿದ್ದಾರೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆರೋಪಿಯನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅನುಷ್ಕಾ ಸಹೋದರಿ ಹಾಗೂ ಸಂತ್ರಸ್ತೆಯ ಗಂಡ ಇಬ್ಬರು ಸಹಪಾಠಿಯಾಗಿದ್ದರು. ಪ್ರಸ್ತುತ ಸಂತ್ರಸ್ತೆಯ ಪತಿ ವಿದೇಶದಲ್ಲಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT