ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ | ಹೆಚ್ಚಿದ ಭಕ್ತರ ಸಂಖ್ಯೆ; ದರ್ಶನ ಸಮಯ 1 ಗಂಟೆ ಹೆಚ್ಚಳ

Published 10 ಡಿಸೆಂಬರ್ 2023, 14:34 IST
Last Updated 10 ಡಿಸೆಂಬರ್ 2023, 14:34 IST
ಅಕ್ಷರ ಗಾತ್ರ

ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭೇಟಿ ಕೊಡುವ ಭಕ್ತರ ಸಂಖ್ಯೆ ಹೆಚ್ಚಿದ ಕಾರಣ ದೇವರ ದರ್ಶನದ ಸಮಯವನ್ನು 1 ಗಂಟೆ ಹೆಚ್ಚಿಸಲು ತಿರವಾಂಕೂರು ದೇವಸ್ಥಾನ ಮಂಡಳಿ(ಟಿಡಿಬಿ) ನಿರ್ಧರಿಸಿದೆ.

ಮಧ್ಯಾಹ್ನ 4ರಿಂದ ರಾತ್ರಿ 11ರವರೆಗೆ ಬದಲಾಗಿ ಮಧ್ಯಾಹ್ನ 3ರಿಂದ ರಾತ್ರಿ 11ರವರೆಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಮಂಡಳಿ ತಿಳಿಸಿದೆ.

ಈ ನಡುವೆ, ದೇವರ ದರ್ಶನಕ್ಕಾಗಿ ಭಕ್ತರು 15 ರಿಂದ 20 ಗಂಟೆಗಳ ಕಾಲ ಸರದಿಯಲ್ಲಿ ಕಾಯಬೇಕು. ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಲ್ಲ. ಪೊಲೀಸ್‌ ಸಿಬ್ಬಂದಿಯನ್ನೂ ನೇಮಿಸಿಲ್ಲ. ಭಕ್ತರ ಹಿತರಕ್ಷಣೆಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್‌ನ ಮಾರ್ಗಸೂಚಿಗಳನ್ನು ಕಡೆಗಣಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ವಿ. ಡಿ. ಸಥೇಶನ್ ಆರೋಪಿಸಿದ್ದರು.

‘ಸರದಿಯಲ್ಲಿ ನಿಲ್ಲುವ ಭಕ್ತರಿಗೆ ನೀರು ಮತ್ತು ಬಿಸ್ಕೆಟ್‌ ವ್ಯವಸ್ಥೆ ಮಾಡಲಾಗಿದೆ’ ಎಂದು ಸಥೇಶನ್‌ ಅವರ ಆರೋಪಕ್ಕೆ ಮಂಡಳಿ ತಿರುಗೇಟು ನೀಡಿದೆ.

ಭದ್ರತೆಯ ದೃಷ್ಟಿಯಿಂದ ದಿನವೊಂದಕ್ಕೆ 75 ಸಾವಿರ ಭಕ್ತರಿಗಷ್ಟೇ ದರ್ಶನದ ಅವಕಾಶ ಮಾಡಿಕೊಡುವಂತೆ ಐಜಿ ಸ್ಪರ್ಜನ್‌ ಕುಮಾರ್ ಟಿಡಿಬಿಗೆ ಮನವಿ ಮಾಡಿದ್ದಾರೆ.

41 ದಿನಗಳ ಕಾಲ ನಡೆಯುವ ಮಂಡಲಂ-ಮಕರವಿಳಕ್ಕು ಯಾತ್ರೆ ನವೆಂಬರ್ 16ರಿಂದ ಪ್ರಾರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT